ADVERTISEMENT

ಬಾಗಲಕೋಟೆ: ವಾಹನಗಳಿಗೆ ಪ್ರತಿಫಲಕಗಳನ್ನು ಅಳವಡಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 8:03 IST
Last Updated 21 ನವೆಂಬರ್ 2025, 8:03 IST
ಬನಹಟ್ಟಿಯ ಪಿ.ಎಸ್.ಐ ಶಾಂತಾ ಹಳ್ಳಿ ಮತ್ತು ಸಿಬ್ಬಂದಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಗಳಿಗೆ ಪ್ರತಿಫಲಕಗಳನ್ನು ಅಳವಡಿಸುವಂತೆ ಚಾಲಕರಲ್ಲಿ ಜಾಗೃತಿ ಮೂಡಿಸಿದರು
ಬನಹಟ್ಟಿಯ ಪಿ.ಎಸ್.ಐ ಶಾಂತಾ ಹಳ್ಳಿ ಮತ್ತು ಸಿಬ್ಬಂದಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಗಳಿಗೆ ಪ್ರತಿಫಲಕಗಳನ್ನು ಅಳವಡಿಸುವಂತೆ ಚಾಲಕರಲ್ಲಿ ಜಾಗೃತಿ ಮೂಡಿಸಿದರು   

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ಹೊತ್ತು ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಆದ್ದರಿಂದ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಚಾಲಕರು ತಮ್ಮ ಟ್ರಾಲಿಗಳಿಗೆ ಕಡ್ಡಾಯವಾಗಿ ರಿಫ್ಲೆಕ್ಟರ್ ಗಳನ್ನು ಅಳವಡಿಸುವಂತೆ ಬನಹಟ್ಟಿ ಪಿಎಸ್ಐ ಶಾಂತಾ ಹಳ್ಳಿ ಸೂಚನೆ ನೀಡಿದರು.

ಅವರು ಬುಧವಾರ ಇಲ್ಲಿನ ಆಸಂಗಿ ಕ್ರಾಸ್ ಹತ್ತಿರ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಮೇಲೆ ಕಬ್ಬು ಸಾಗಿಸುವ ಟ್ರ್ಯಾಕ್ಟರಗಳಿಗೆ ರಿಫ್ಲೆಕ್ಟರ್ ಗಳನ್ನು ಅಳವಡಿಸುವಂತೆ ಚಾಲಕರಿಗೆ ಸೂಚನೆ ನೀಡಿ ಮಾತನಾಡಿದರು.

ಅದೇ ರೀತಿಯಾಗಿ ಟ್ರ್ಯಾಕ್ಟರ್ ಚಾಲಕರು ಯಾವುದೇ ಧ್ವನಿ ವರ್ಧಕಗಳನ್ನು ಬಳಸದೆ ವಾಹನ ಚಾಲನೆ ಮಾಡಬೇಕು. ಧ್ವನಿ ವರ್ಧಕಗಳನ್ನು ಹಚ್ಚಿಕೊಂಡು ವಾಹನ ಚಲಾಯಿಸುವುದರಿಂದ ಹಿಂಬದಿಯ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಚಾಲಕರು ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ತಮ್ಮ ಟ್ರ್ಯಾಕ್ಟರ್ ಗಳನ್ನು ಚಲಾಯಿಸಬೇಕು. ಚಾಲಕರು ಎಲ್ಲ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ‍್ಳಬೇಕು ಎಂದು ತಿಳಿಸಿದರು.

ADVERTISEMENT

ಕ್ರೈಂ ಪಿಎಸ್ಐ ಪಿ.ಬಿ.ಪೂಜಾರಿ, ಎಎಸ್ಐ ಎನ್.ಡಿ. ಐಯತವಾಡ ಮತ್ತು ಎಂ.ಎನ್.ಕಾಗವಾಡ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.