ADVERTISEMENT

ಅಂಚೆ ನೌಕರರ ಸಂಪು 2ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 8:20 IST
Last Updated 18 ಅಕ್ಟೋಬರ್ 2012, 8:20 IST

ಬಳ್ಳಾರಿ: ನ್ಯಾ. ತಲ್ವಾರ್ ಸಮಿತಿ ಸಲ್ಲಿಸಿರುವ ವರದಿಯನ್ವಯ ಗ್ರಾಮೀಣ ಅಂಚೆ (5 ಗಂಟೆಗಿಂತಲೂ ಅಧಿಕ ಸೇವೆ ಸಲ್ಲಿಸುವ) ಸೇವಕರ ಸೇವೆ ಕಾಯಂ ಗೊಳಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ಥಳೀಯ ಅಂಚೆ ಪ್ರಧಾನ ಕಚೇರಿ ಎದುರು ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘದವರು ಆರಂಭಿಸಿರುವ ಮುಷ್ಕರ ಬುಧವಾರ ಎರಡನೇ ದಿನಕ್ಕೆ ಕಾಲಿರಿಸಿದೆ.

ಖಾಲಿ ಹುದ್ದೆಗಳ ಭರ್ತಿ ಮಾಡಿ ಕೊಳ್ಳಬೇಕಲ್ಲದೆ, ದಿನಗೂಲಿ ನೌಕರರ ವೇತನ ಪರಿಷ್ಕರಿಸಿ, ಸಕಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

150 ವರ್ಷಗಳ ಇತಿಹಾಸ ಹೊಂದಿ ರುವ ಅಂಚೆ ಇಲಾಖೆಯಲ್ಲಿ ಸಾವಿರಾರು ಕಾರ್ಮಿಕರು ಜೀತದಾಳುಗಳಂತೆ ದುಡಿ ಯುತ್ತಿದ್ದು, ತುಳಿತಕ್ಕೆ ಒಳಗಾಗಿದ್ದಾರೆ. ಕಾರ್ಮಿಕರನ್ನು ಕ್ಷುಲ್ಲಕವಾಗಿ ನೋಡುತ್ತ, ತಾರತಮ್ಯ ಅನುಸರಿಸ ಲಾಗುತ್ತಿದೆ ಎಂದು ಸಮಿತಿ ಮುಖಂಡ ಎರ‌್ರಿಸ್ವಾಮಿ ಆರೋಪಿಸಿದರು.

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಹಾಗೂ ನ್ಯಾ.ತಲ್ವಾರ್ ಸಮಿತಿ ವರದಿಗೆ  ಅನುಗುಣವಾಗಿ ಇಲಾಖೆಯ ಕಾಯಂ ನೌಕರರಿಗೆ ನೀಡುವ ಪಿಎಲ್‌ಬಿ ಬೋನಸ್ ರೂ 3500 ನೀಡಬೇಕು. ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿನ  ದೋಷ ನಿವಾರಿಸಬೇಕು. ಖಾಲಿ ಹುದ್ದೆ ಗಳನ್ನು ರದ್ದುಗೊಳಿಸದೆ, ಜಿಡಿಎಸ್ ನೌಕರರನ್ನು ಆ ಹುದ್ದೆಗಳಿಗೆ ನೇಮಿಸ ಬೇಕು. ವೇತನ ಕಡಿತ ನಿಲ್ಲಿಸಬೇಕು. ತಡೆಹಿಡಿದಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಧರಣಿ ಅವರು ಆಗ್ರಹಿಸಿದರು.

ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘಮುಖಂಡರಾದ ಕೆ. ರಾಮಮೂರ್ತಿ, ಬನ್ನೇಶ್, ಶೇಷಗಿರಿ, ಶಂಕರಪ್ಪ, ಸಂಘದ ಕರ್ನಾಟಕ ವಲಯ ಉಪಾಧ್ಯಕ್ಷ ಜಿ. ಶಂಕರಗೌಡ, ಖಜಾಂಚಿ ಎಚ್.ಎಂ. ವೀರಭದ್ರಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.