ADVERTISEMENT

ಅಂತರ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 4:50 IST
Last Updated 20 ಆಗಸ್ಟ್ 2012, 4:50 IST

ಕುರುಗೋಡು: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಕಾಲೇಜು ಗುಡ್ಡಗಾಡು ಓಟದ ಸ್ಪರ್ಧೆಯನ್ನು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಪಟ್ಟಣದಲ್ಲಿ ಶನಿವಾರ ಆಯೋಜಿಸಲಾಗಿತ್ತು.


ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ಸಂಯೋಜಕ ಎಂ.ಡಿ ಖಣದಾಳಿ ಉದ್ಘಾಟಿಸಿ ಮಾತನಾಡಿ, ಅಂತರ್ ಕಾಲೇಜು ಮಟ್ಟದಲ್ಲಿ ಕ್ರೀಡೆಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಅನುಭವ ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಪಟ್ಟಣದ ಹಿರಿಯ ಕ್ರಿಕೆಟ್ ಕ್ರೀಡಾಪಟು ಎ.ರವೀಂದ್ರ, ಕಾಲಕಾಲಕ್ಕೆ ಕ್ರೀಡಾಕೂಟಗಳನ್ನು ನಡೆಸುವುದರಿಂದ ಮಕ್ಕಳಲ್ಲಿನ ಸೂಪ್ತ ಕ್ರೀಡಾ ಪ್ರತಿಭೆ ಹೊರತರಲು ಸಹಕಾರಿಯಾಗಲಿದೆ. ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಸಿಕೊಳ್ಳಲು ಸಹಕಾರಿ ಯಾಗಲಿದೆ ಎಂದರು.ಕಾಲೇಜಿನ ಪ್ರಾಚಾರ್ಯ ಜಿ.ಆರ್.ವೆಂಕಟೇಶಲು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಎನ್.ಎಂ. ಗಾಯಿತ್ರಮ್ಮ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಚಂದ್ರ ಶೇಖರ್, ಉಪ ಖಜಾನಾಧಿಕಾರಿ ರಘುರಾಮ್ ನಾಯಕ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ನಾರಾಯಣರೆಡ್ಡಿ, ಎಪಿಎಂಸಿ ನಿರ್ದೇಶಕ ಕೆ.ಕರೆಪ್ಪ, ಮುಖಂಡರಾದ ಎನ್. ಜಯದೇವ ಗೌಡ, ಎಸ್.ಕೆ.ಬಸವರಾಜ, ಬಿ. ಬಸವರಾಜ, ವೀರಶೈವ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ಕೆ. ಚಂದ್ರಶೇಖರ ಗೌಡ,  ಕೆ.ವಿ. ಮುತ್ತೇಗೌಡ ಉಪಸ್ಥಿತರಿದ್ದರು.
ಉಪನ್ಯಾಸಕರಾದ ನಂಜುಂಡಯ್ಯ ಎಂ. ನಿರೂಪಿಸಿದರು. ಎಂ.ಪಿ. ಫಣಿ ಪ್ರಸಾದ್ ಸ್ವಾಗತಿಸಿದರು. ಎಸ್. ಗುರುಬಸಪ್ಪ ವಂದಿಸಿದರು.

ಪುರುಷರ ವಿಭಾಗ: ಇಲ್ಲಿಗೆ ಸಮೀಪದ ವದ್ದಟ್ಟಿಯಿಂದ 12 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಎಸ್.ಪಿ.ರಾಮಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್‌ಗಡ, ಪರಶುರಾಮ್ ಎ.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುರುಗೋಡು. ಆನಂದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕ್ರಮವಾಗಿ ಪ್ರಥಮ,ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ಮಹಾಂತೇಶ್, ಆರ್.ಮಾರುತಿ, ಬಸಯ್ಯ ವಿ., ಶಾಷಾವಲಿ, ಬಂಗಾರಪ್ಪ ಮತ್ತು ಬಿ.ಕೆ.ರಾಕೇಶ್ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.

ಮಹಿಳೆಯರ ವಿಭಾಗ: ಯಲ್ಲಾಪುರ ಕ್ರಾಸ್‌ನಿಂದ 6ಕಿ.ಮೀ. ಓಟದ ಸ್ಪರ್ಧೆಯಲ್ಲಿ ಸರ್ಕಾರಿ ಕುರುಗೋಡಿನ ಪ್ರಥಮ ದರ್ಜೆ ಕಾಲೇಜಿನ ಗೋದಿ ಜೋತಿ, ಊಳೂರು ಗಂಗಮ್ಮ, ಪುಷ್ಪಾವತಿ, ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. ರೋಜಿಯಾಬೀ, ಶಾಂತಾ ಮತ್ತು ಲಕ್ಷ್ಮಿ ನಂತರದ ಸ್ಥಾನಗಳನ್ನು ಪಡೆದರು.
ಈ ಕ್ರೀಡಾಕೂಟದಲ್ಲಿ ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪುರುಷ ಮತ್ತು ಮಹಿಳೆ ಯರ ವಿಭಾಗದಲ್ಲಿ ಚಾಂಪಿಯನ್‌ಷಿಪ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT