ADVERTISEMENT

ಆಧಾರ್ ಕಾರ್ಡ್ ಕೇಂದ್ರ ತೆರೆಯಲು ಮನವಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 9:53 IST
Last Updated 22 ಜೂನ್ 2013, 9:53 IST

ಸಂಡೂರು: ತಾಲ್ಲೂಕಿನ ಕೃಷ್ಣಾನಗರ ಗ್ರಾಮದಲ್ಲಿ ಆಧಾರ್ ಕಾರ್ಡ್ ಮಾಹಿತಿ ದಾಖಲಿಸುವ ಹಾಗೂ ಫೊಟೊ ತೆಗೆಯುವ ಕೇಂದ್ರವನ್ನು ತೆರೆಯುವಂತೆ ಕೋರಿರುವ ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಹಾಗೂ ಗ್ರಾಮ ಘಟಕದ ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ್ ಆರ್. ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಸೇನೆಯ ತಾಲ್ಲೂಕು ಅಧ್ಯಕ್ಷ ಎಂ.ಸತೀಶ್, ಗ್ರಾಮದಲ್ಲಿ ಆಧಾರ್ ಕಾರ್ಡ್ ಕೇಂದ್ರವನ್ನು ತೆರೆಯಲು ವಿನಂತಿಸಿ, ಈ ಮುಂಚೆಯೇ ಸಂಘಟನೆಯ ವತಿಯಿಂದ ತಾಲ್ಲೂಕು ಕಚೇರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು. ವಿಧಾನಸಭಾ ಚುನಾವಣೆ ಮುಗಿದ ನಂತರದಲ್ಲಿ ಗ್ರಾಮದಲ್ಲಿ ಆಧಾರ್ ಕಾರ್ಡ್ ಕೇಂದ್ರವನ್ನು ತೆರೆಯುವುದಾಗಿ ಆಗ ಆಧಿಕಾರಿಗಳು ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಂದಿರುವುದಿಲ್ಲ.

ಕೃಷ್ಣಾನಗರ ಗ್ರಾಮದಿಂದ ಸಂಡೂರಿನಲ್ಲಿರುವ ಆಧಾರ್ ಕಾರ್ಡ್ ಕೇಂದ್ರಕ್ಕೆ ವೃದ್ಧರೂ, ಮಹಿಳೆಯರು, ಮಕ್ಕಳು ಹೋಗಿ ಬರಲು ತೊಂದರೆಯಾಗುತ್ತಿದೆ. ಆದ್ದರಿಂದ ಆಧಾರ್ ಕಾರ್ಡ್‌ಗಾಗಿ ಮಾಹಿತಿ ಸಂಗ್ರಹ, ಪೋಟೊ ತೆಗೆಯುವ ಮತ್ತು ದಾಖಲಿಸುವ ಕೇಂದ್ರವನ್ನು ಇತರ ಗ್ರಾಮಗಳಂತೆ ಕೃಷ್ಣಾನಗರ ಗ್ರಾಮದಲ್ಲಿಯೂ ತೆರೆಯುವಂತೆ ಕೋರಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಸೇನೆಯ ತಾಲ್ಲೂಕು ಅಧ್ಯಕ್ಷ ಎಂ.ಸತೀಶ್, ಉಪಾಧ್ಯಕ್ಷ ಬಿ.ಇಮಾಂಬಾಷ, ಸಂಚಾಲಕರಾದ ಹಬೂಬಾಕರ್, ಮಾರುತಿ, ಖಜಾಂಚಿ ತಾಯಣ್ಣ, ಸಹ ಕಾರ್ಯದರ್ಶಿ ಶಂಕರ್, ಕೃಷ್ಣಾನಗರ ಗ್ರಾಮ ಘಟಕ ಅಧ್ಯಕ್ಷ ಮಹೇಂದ್ರ ಹಾಗೂ ಉಪಾಧ್ಯಕ್ಷ ಎಚ್. ಸುಭಾನ್ ಚಿತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.