ADVERTISEMENT

ಕಂಪ್ಯೂಟರ್ ವಿತರಣೆಯಲ್ಲಿ ತಾರತಮ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:00 IST
Last Updated 14 ಅಕ್ಟೋಬರ್ 2011, 5:00 IST

ಕೊಟ್ಟೂರು: ಪಟ್ಟಣ ಪಂಚಾಯ್ತಿಯಲ್ಲಿ ಎಸ್.ಸಿ. ಎಸ್.ಟಿ. ಸಮುದಾಯದಕ್ಕೆ ಶೇ 22.5 ಅನುದಾನದಡಿ ಕಂಪ್ಯೂಟರ್ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಫಲಾನುಭವಿ ಹೊಸಕೋಟೆ ಬಸವರಾಜ್ ಆರೋಪಿಸಿದ್ದಾರೆ.

2010-11ನೇ ಸಾಲಿನಲ್ಲಿ ಕಂಪ್ಯೂಟರ್ ತರಬೇತಿ ಪಡೆದಿದ್ದೇನೆ. ಪಟ್ಟಣ ಪಂಚಾಯ್ತಿ ನನ್ನನ್ನೂ ಫಲಾನುಭವಿ ಎಂದು ಪಟ್ಟಣ ಪಂಚಾಯ್ತಿ  ಆಯ್ಕೆ ಮಾಡಿದೆ.ನನಗೆ ದೊರೆಯಬೇಕಾದ ಕಂಪ್ಯೂಟರ್ ಅನ್ಯರ ಪಾಲಾಗಿದೆ. ನನ್ನ ಕಂಪ್ಯೂಟರ್ ಏನಾಯಿತು ಎಂಬುದೇ ತಿಳಿಯುತ್ತಿಲ್ಲ ಎಂದು ಬುಧವಾರ ಪತ್ರಿಕೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಅರುಣ್ ಕುಮಾರ್ ಫಲಾನುಭವಿ ಹೊಸಕೋಟೆ ಬಸವರಾಜ್‌ಗೆ ನಿಮ್ಮ ಕಂಪ್ಯೂಟರ್ ಎಲ್ಲಿಯೇ ಹೋಗಿದ್ದರೂ ತರಿಸಿಕೊಡು ವುದಾಗಿ ಭರವಸೆ ನೀಡಿದರು.
ಸಮುದಾಯ ಯೋಜನಾಧಿಕಾರಿ ಹನುಮಕ್ಕ ಅವರಿಗೆ ಹೊಸಕೋಟೆ ಬಸವರಾಜ ಅವರ ಕಂಪ್ಯೂಟರ್‌ನ್ನು ಯಾರು ತೆಗೆದುಕೊಂಡು ಹೋಗಿದ್ದಾರೆ.ಪೊಲೀಸರಿಗೆ ದೂರು ನೀಡುವಂತೆ ಆದೇಶ ನೀಡಿದರು.

ಬದ್ದಿ ಮೈಲಾಪ್ಪ, ಬಣಕಾರ ಪರಶುರಾಮ್, ರಾಂಪುರದ ಶ್ರೀನಿವಾಸ್ ಮರಿಸ್ವಾಮಿ,  ಕನ್ನಾಕಟ್ಟಿ ಭರಮಪ್ಪ, ಎಂ. ಕೊಟ್ರೇಶ, ಎನ್. ಕೊಟ್ರೇಶ, ಬಿ. ವೀರೇಶ, ಪಟ್ಟಣ ಪಂಚಾಯ್ತಿ ಸಭೆಯಲ್ಲಿ ನಮ್ಮನ್ನು ಕಂಪ್ಯೂಟರ್ ಪಡೆಯಲು ಆಯ್ಕೆ ಮಾಡಲಾಗಿದೆ.

ಆದರೆ ನಮ್ಮನ್ನು ಹೊರತು ಪಡಿಸಿಬೇರೆಯವರಿಗೆ ಬೇರೆ ಫಲಾನುಭವಿಗಳಿಗೆ ಕಂಪ್ಯೂಟರ್, ಹೊಲಿಗೆ ಯಂತ್ರ, ಕಬ್ಬಿಣದ ತಗಡುಗಳನ್ನು ವಿತರಿಸುವ ಮೂಲಕ ನಮಗೆಲ್ಲ ಅನ್ಯಾಯಮಾಡಲಾಗಿದೆ ಎಂದು ಆರೋಪಿಸಿದರು.

ಶೇ 22.5 ಅನುದಾನದಡಿ ಫಲಾನುವಿಗಳನ್ನು ಪಾರದರ್ಶಕ ಆಯ್ಕೆ ಮಾಡಬೇಕಿತ್ತು. ನಾನು ಹೊಸದಾಗಿ ಬಂದಿದ್ದೇನೆ. ಈ ಮೊದಲೆ ಆಯ್ಕೆ ಮಾಡಲಾಗಿದೆ. ಗೊಂದಲದ ನಡುವೆ ಕಂಪ್ಯೂಟರ್, ಹೊಲಿಗೆ ಯಂತ್ರ, ಕಬ್ಬಿಣದ ತಗಡುಗಳನ್ನು ವಿತರಿಸ ಲಾಯಿತು,

ಈಗ ಸಮಸ್ಯೆಗಳನ್ನು ನಾನು  ಎದುರಿಸಬೇಕಾಗಿದೆ. ನನ್ನ 25 ವರ್ಷದ ಸೇವೆಯಲ್ಲಿ ಈ ರೀತಿಯ ಸಮಸ್ಯೆಗಳನ್ನು ಕಂಡಿರಲಿಲ್ಲ. ನಿಜಕ್ಕೂ ಬೇಜಾರಿದೆ ಎಂದು ಅಳಲನ್ನು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.