ADVERTISEMENT

ಕಂಪ್ಲಿಯಲ್ಲಿ ಜಿಎಸ್‌ಎಸ್‌ ಸ್ವರ ಸ ್ಮರಣಾಂಜಲಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 9:54 IST
Last Updated 2 ಜನವರಿ 2014, 9:54 IST

ಕಂಪ್ಲಿ: ಸ್ಥಳೀಯ ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ವತಿಯಿಂದ ಭಾನುವಾರ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ‘ಸ್ವರ ಸ್ಮರಣಾಂಜಲಿ’ ಅರ್ಪಣೆ ಮತ್ತು ನೂತನ ‘ಸುನಾದ ಸಂಗೀತ ಪಾಠ ಶಾಲೆ’ ಉದ್ಘಾಟನೆ ನಡೆಯಿತು. ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಧರ್ಮದರ್ಶಿ ಕೆ. ಸತ್ಯನಾರಾಯಣ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ವಿರೂ ಪಾಕ್ಷಯ್ಯಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುನಾದ ಸಂಗೀತ ಪಾಠ ಶಾಲೆ ಪ್ರಾಚಾರ್ಯ ಎಸ್.ಎಸ್.ಎಂ. ಹಿರೇಮಠ, ಹಗರಿಬೊಮ್ಮನಹಳ್ಳಿ ಆದರ್ಶ ಶಾಲೆ ಸಂಗೀತ ಶಿಕ್ಷಕಿ ಸಂಗೀತ ಹಿರೇಮಠ, ಗೆಣಕಿಹಾಳ್ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಗೋವರ್ಧನರೆಡ್ಡಿ ಮತ್ತು ಸಂಗಡಿಗರು ಜಿಎಸ್ಎಸ್ ಅವರ ಭಾವಗೀತೆಗಳನ್ನು, ವಚನಗಳನ್ನು ಹಾಡುವ ಮೂಲಕ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪರವರಿಗೆ ಸ್ವರ ಸ್ಮರಣಾಂಜಲಿ ಸಮರ್ಪಿಸಿದರು.
 
ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರ ಶಾಸ್ತ್ರಿ, ಮಹ್ಮದ್ ಹನೀಫ್‌, ಶ್ಯಾಮ್‌ ಸುಂದರ್‌, ಎಸ್.ಜಿ. ಚಿತ್ರಗಾರ್, ಅಗಳಿ ಪಂಪಾಪತಿ, ಎಸ್.ಡಿ. ಬಸವರಾಜ್, ರುಕ್ಮಣ ಬಾಬುರಾಜ್ ಶ್ರೀಖಂಡೆ, ಶಿವಲೀಲಾ ಬಸವರಾಜ್, ನೂಲ್ವಿ ಮಹಾಂತೇಶ್, ಬೂದಗುಂಪಿ ವೀರಭದ್ರಪ್ಪ, ಟಿ. ಪರಶುರಾಮ ಮತ್ತಿತರರು ಹಾಜರಿದ್ದರು.

ಸುನಾದ ಸಂಗೀತ ಪಾಠ ಶಾಲೆ ಸಂಚಾಲಕ ಬಿ. ಮೌನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಬಂಗಿ ದೊಡ್ಡ ಮಂಜು ನಾಥ್ ಸ್ವಾಗತಿಸಿದರು. ಅಧ್ಯಕ್ಷ ಜಿ. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಬಿ. ಚಂದ್ರಶೇಖರ್ ವಂದಿಸಿದರು. -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.