ADVERTISEMENT

ಕಮಲಾಪುರದಲ್ಲಿ ಚಿತ್ರಕಲಾ ಉತ್ಸವ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 5:29 IST
Last Updated 23 ಅಕ್ಟೋಬರ್ 2017, 5:29 IST
ಕಲಾವಿದ ತಲ್ಲೀನರಾಗಿ ಚಿತ್ರ ಬಿಡಿಸುತ್ತಿರುವುದು
ಕಲಾವಿದ ತಲ್ಲೀನರಾಗಿ ಚಿತ್ರ ಬಿಡಿಸುತ್ತಿರುವುದು   

ಹೊಸಪೇಟೆ: ‘ಹಂಪಿ ಉತ್ಸವ’ದ ಅಂಗವಾಗಿ ತಾಲ್ಲೂಕಿನ ಕಮಲಾಪುರದಲ್ಲಿ ಹಮ್ಮಿಕೊಂಡಿರುವ ಗೋಡೆಬರಹ ಚಿತ್ರಕಲಾ ಉತ್ಸವ ಮತ್ತು ಸ್ವಚ್ಛತಾ ಜಾಗೃತಿ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು

ಗೋಡೆ ಮೇಲೆ ಚಿತ್ರ ಬಿಡಿಸಿ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ರಾಮ್‌ ಪ್ರಸಾದ್‌ ಮನೋಹರ್‌ ಮಾತನಾಡಿ, ‘ಸ್ವಚ್ಛತೆ ಎಂಬುದು ಜನಾಂದೋಲನವಾಗಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ವಾರ ನಡೆಯಲಿರುವ ಈ ಉತ್ಸವದಲ್ಲಿ ಹೆಚ್ಚಿನ ಜನ ಭಾಗವಹಿಸಬೇಕು’ ಎಂದರು.

’ಇದರಲ್ಲಿ ಭಾಗವಹಿಸಿದ ನಾಲ್ವರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು. ಅದರಲ್ಲಿ ಮೊದಲು ಬಂದವರಿಗೆ ದ್ವಿಚಕ್ರ ವಾಹನ, ಇನ್ನುಳಿದವರಿಗೆ ಬೈಸಿಕಲ್‌ ವಿತರಿಸಲಾಗುವುದು’ ಎಂದು ಘೋಷಿಸಿದರು. ನಂತರ ಕಲಾವಿದರು, ವಿದ್ಯಾರ್ಥಿಗಳು ಗೋಡೆಗಳ ಮೇಲೆ ಚಿತ್ರ ಬಿಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.