ADVERTISEMENT

ಕಳಕಳಿಗೆ ಕಾದಿರುವ ಸ್ಮಾರಕಗಳು...

ಹಂಪಿ: ಪ್ರವಾಸಿಗರಿಗೆ ಬೇಕು ಸೌಲಭ್ಯ..

ಬಸವರಾಜ ಮರಳಿಹಳ್ಳಿ
Published 10 ಜನವರಿ 2014, 8:40 IST
Last Updated 10 ಜನವರಿ 2014, 8:40 IST

ಹೊಸಪೇಟೆ: ‘ಜಗತ್ತಿನ ಅತ್ಯಂತ ವಿಶಾಲ ಬಯಲು ವಸ್ತು ಸಂಗ್ರಹಾಲಯ’ ಎಂದೇ ಬಿಂಬಿತವಾಗಿರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಸ್ಮಾರಕಗಳ ಕಲಾ ವೈಭವಕ್ಕೆ ಸರಿಸಾಟಿಯೇ ಇಲ್ಲ. 14ನೇ ಶತಮಾನದಲ್ಲಿ ಹಕ್ಕ–ಬುಕ್ಕರಿಂದ ಸ್ಥಾಪನೆಯಾದ ಈ ಸಾಮ್ರಾಜ್ಯವನ್ನು ಎರಡು ಶತಮಾನಗಳ ಕಾಲ ಆಳಿದ ನಾಲ್ಕು

 ಹಂಪಿ: ಬೆರಗು ಮೂಡಿಸುತ್ತಿರುವ ದೀಪಾಲಂಕಾರ
ಹಂಪಿ: ಇನ್ನೇನು ಸೂರ್ಯಾಸ್ತದ ಸಮಯ. ಹಂಪಿಯ ಪ್ರಮುಖ ರಸ್ತೆಯಲ್ಲಿರುವ  ಕಡ್ಡಿ­ರಾಂಪುರ ಕ್ರಾಸ್‌ನ ಬಳಿ ತಿರುಗುತ್ತಿದ್ದಂತೆಯೇ ಸ್ವರ್ಗಲೋಕವನ್ನೇ ಪ್ರದೇಶಿಸಿದಂತೆ ಭಾಸವಾಗುತ್ತದೆ.
ಹೌದು! ಕಳೆದೆರಡು ವರ್ಷಗಳಿಂದ ನಡೆಯದ ಹಂಪಿ ಉತ್ಸವ ಪ್ರಸಕ್ತ ಸಾಲಿನಲ್ಲಿ ಇದೇ 10ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಹಂಪಿಯ ಪರಿಸರವೇ  ದೀಪಾಲಂಕಾರದಿಂದ ಸಿಂಗಾರಗೊಂಡಿದೆ.
ಗಿಡಮರ, ಕಲ್ಲು–ಬಂಡೆ, ಐತಿಹಾಸಿಕ ಸ್ಮಾರಕಗಳಿಗೆಲ್ಲಾ ಹಗಲ ಬೆಳಕೂ ನಾಚುವಂತೆ ಕಂಗೊಳಿಸುತ್ತಿದ್ದು, ಇಡೀ ವಾತಾವಣ ಬದಲಾಗಿ ವಿಶಿಷ್ಟ ಅನುಭವ ನೀಡುತ್ತಿವೆ.
ಹಂಪಿ ರಸ್ತೆಯ ಕಡ್ಡಿರಾಂಪುರ ಕ್ರಾಸ್‌ನಿಂದ ಮೂರೂವರೆ ಕಿ.ಮೀ. ಉದ್ಧಕ್ಕೂ ರಸ್ತೆ ಬದಿಯಲ್ಲಿ ಗಿಡ– ಮರಗಳಲ್ಲಿ ದೀಪಾಲಂಕಾರ ಮಾಡಿರುವುದರಿಂದ, ಅಲ್ಲೆಲ್ಲ ದೀಪಗಳ ಗೊನೆ ಬಿಟ್ಟದೆಯೇ ಎಂಬ ಅನುಮಾನ ಮೂಡುವಂತೆ ಮಾಡುತ್ತಿದೆ. ಹಂಪಿಯ ಬಹುತೇಕ ಸ್ಮಾರಕಗಳು ದೀಪದಿಂದ ಅಲಂಕೃತಗೊಂಡಿದ್ದು, ಆಕರ್ಷಕವಾಗಿ ಕಾಣುತ್ತಿವೆ.
ಈ ಬೆಳಕಿನಿಂದಾಗಿ ಹಂಪಿಯಲ್ಲಿ ಕತ್ತಲು ಆವರಿಸಿದ ಅನುಭವವೇ ಆಗದಂತಾಗಿದ್ದು,  ಇಡೀ ಪರಿಸರ ಸ್ವರ್ಗದ ಸೋಗು ಹಾಕಿಕೊಂಡಂತಿದೆ. ಉತ್ಸವದ ಅಂಗವಾಗಿ ಕಲೆಯ ರಸದೌತಣ ನೀಡಲು ಸಿದ್ಧಗೊಂಡ ಎಂ.ಪಿ. ಪ್ರಕಾಶ ವೇದಿಕೆ, ಶ್ರೀ ವಿದ್ಯಾರಣ್ಯ ವೇದಿಕೆ, ಹಕ್ಕ–ಬುಕ್ಕ ವೇದಿಕೆ ಸೇರಿದಂತೆ ಈ ಉತ್ಸವದ ಪ್ರಮುಖ ವೇದಿಕೆಯಾಗಿರುವ ಶ್ರೀಕೃಷ್ಣದೇವರಾಯ ವೇದಿಕೆ ಬೆಳಕಿನ ಹೊಳೆಯಲ್ಲಿಯೇ ಮುಳುಗಿ ಹೋಗಿದೆ.
ಹತ್ತಾರು ಜನರೇಟರ್‌ಗಳು, ಹೊಸದಾ­ಗಿಯೇ ಅಳವಡಿಸಿದ ಟ್ರಾನ್ಸ್‌ಫಾರ್ಮರ್‌, ಕಳೆದ 15 ದಿನಗಳಿಂದ ನೂರಾರು ಕಾರ್ಮಿಕರು ಸ್ವರ್ಗ ಲೋಕವನ್ನೇ ನಾಚಿಸುವಂತೆ ದೀಪಾಲಂಕಾರ ಮಾಡುವಲ್ಲಿ ಶ್ರಮಿಸಿದ್ದಾರೆ. ಕಲ್ಲು ಬಂಡೆಗಳು, ಸ್ಮಾರಕಗಳಿಗೆ ಅತ್ಯಾಧುನಿಕ ಲೈಟ್‌ಗಳು, ವೈಟ್‌ ಮೆಟಲ್‌ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಒಟ್ಟಾರೆ, ಉತ್ಸವಕ್ಕಾಗಿ ಮೂರು ದಿನಗಳ ಕಾಲವೂ ಹಗಲು– ರಾತ್ರಿ­ಯಲ್ಲಿ  ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯ­ಕ್ರಮ­ಗಳು ಕಲಾಸಕ್ತರಿಗೆ ರಸದೌತಣ ನೀಡ­ಲಿದ್ದು, ಹಂಪಿ ಇಡೀ ಬೆರಗು ಮೂಡಿಸಲು ಸನ್ನದ್ಧವಾಗಿದೆ.
ಅನಂತ ಜೋಶಿ

ರಾಜವಂಶಗಳು ಶಿಲ್ಪಕಲೆ, ಸಾಹಿತ್ಯ, ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿವೆ. 

ವಿಜಯನಗರ ಅರಸರಲ್ಲಿಯೇ ಪ್ರಮುಖರಾದ ಪ್ರೌಢದೇವರಾಯ ಹಾಗೂ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಸಂಸ್ಕೃತಿ ಮತ್ತು ಶಿಲ್ಪಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದ್ದು, ಈ ಕಾಲದಲ್ಲಿ ಸ್ಮಾರಕಗಳ ನಿರ್ಮಾಣ ಅತ್ಯಂತ ವೈಭವೋಪೇತವಾಗಿ ಸಾಗಿತ್ತು.

ಸಾಮ್ರಾಜ್ಯ ಅವನತಿ ಹೊಂದುವ ಅವಧಿಯಲ್ಲಿ ವಿರೋಧಿ ಅರಸರ ದಾಳಿಗೆ ತುತ್ತಾಗಿ ಭಗ್ನಗೊಂಡ ಸ್ಮಾರಕಗಳು ಇಂದಿಗೂ ಗತ ವೈಭವನವನ್ನು ಸಾರುವ ಸಾಕ್ಷ್ಯ ಚಿತ್ರಗಳಾಗಿವೆ. ಇತಿಹಾಸದ ರಾಯಭಾರಿಗಳಾಗಿರುವ ಇಲ್ಲಿನ ಸ್ಮಾರಕಗಳು, ಅಂದಿನ ಸಾಂಸ್ಕೃತಿಕ ವೈಭವವನ್ನು ತಿಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿವೆ. 

ಇಂತಹ ರಮಣೀಯ ಇತಿಹಾಸ ಹೊಂದಿರುವ ವಿಜಯನಗರ ಅರಸರ ನಯನ ಮನೋಹರವಾದ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದ ಮೇಲಂತೂ ಹಂಪಿಯ ಖ್ಯಾತಿ ವಿಶ್ವದ ಮೂಲೆ ಮೂಲೆಗೂ ಪಸರಿಸಿದೆ.

ಆದರೆ, ವಿಶ್ವ ಪ್ರಸಿದ್ಧ ಸ್ಮಾರಕಗಳ ರಕ್ಷಣೆ ಕಾರ್ಯ ಈಗ ಯಾವ ರೀತಿ ನಡೆಯುತ್ತಿದೆ ಎಂಬುದೇ ಪ್ರಸ್ತುತ ಚರ್ಚೆಯ ವಿಷಯಗಳಲ್ಲೊಂದಾಗಿದೆ.
ಹಂಪಿಯ ಸ್ಮಾರಕಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಯಾವ ಮಟ್ಟದಲ್ಲಿ ಸ್ಮಾರಕಗಳ ರಕ್ಷಣೆ ಮಾಡುತ್ತಿವೆ ಎಂಬ ಅವಲೋಕನವೂ ಅಗತ್ಯವಾಗಿದೆ.

ಇತಿಹಾಸಕಾರರ ಸ್ವರ್ಗವಾಗಿರುವ ಹಂಪಿಯು ದಕ್ಷಿಣ ಭಾರತದ ಪ್ರಮುಖ ಪ್ರವಾಸೋದ್ಯಮ ಕೇಂದ್ರವೂ ಹೌದು. ಆದರೆ, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸಗಳು ಆಗದಿರುವುದು ಎಲ್ಲ ಸರ್ಕಾರಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಇದ್ದೂ ಇಲ್ಲದಂತಿರುವ ಪ್ರವಾಸೋದ್ಯಮ ಇಲಾಖೆಯ ಕಚೇರಿ, ಸಮರ್ಪಕ ರಸ್ತೆ ಸೌಲಭ್ಯದ ಕೊರತೆ, ವಸತಿ ವ್ಯವಸ್ಥೆ, ಪರಿಣತ ಪ್ರವಾಸಿ ಮಾರ್ಗದರ್ಶಿಗಳ ಕೊರತೆ... ಹೀಗೆ ಹತ್ತುಹಲವು ಸೌಲಭ್ಯಗಳ ಕೊರತೆಯು ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಂಟಕ ಪ್ರಾಯವಾಗಿವೆ.

ಯುನೆಸ್ಕೋ ಸೂಚನೆಯ ಮೇರೆಗೆ ಹಾಗೂ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡ ಬಳಿಕವಂತೂ ಹಂಪಿಯಲ್ಲಿ ಕುಡಿಯಲು ನೀರೂ ದೊರೆಯದೆ ದೇಶ, ವಿದೇಶಗಳ ಪ್ರವಾಸಿಗರು ಪರದಾಡುವ ಸ್ಥಿತಿ ಎದುರಾಗಿದೆ.

ಈ ಎಲ್ಲ ಕೊರತೆ ನೀಗಿಸುವ ಉದ್ದೇಶದಿಂದಲೇ ಪ್ರತಿ ವರ್ಷ ಹಂಪಿ ಉತ್ಸವ ಆಚರಿಸಲಾಗುತ್ತಿದೆ. ಆದರೆ ಉತ್ಸವದ ಸಂದರ್ಭದಲ್ಲಿ ರಸ್ತೆಗೆ ತೇಪೆ ಹಾಕುವ ಕೆಲಸ ಹೊರತುಪಡಿಸಿ ಶ್ವಾಶತವಾಗಿ ಉಳಿಯುವಂತಹ ಕಾಮಗಾರಿಗಳು ಪ್ರಮುಖ ಪ್ರವಾಸೋದ್ಯಮ ಕೇಂದ್ರದಲ್ಲಿ ಆಗಿಲ್ಲ.

ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಸಿಕೊಂಡಿರುವ ಹಂಪಿಯಲ್ಲಿ ಈಗ ಮತ್ತೆ ಉತ್ಸವದ ಮೆರಗು ಆರಂಭವಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಇಲ್ಲಿನ ರಸ್ತೆಗಳಿಗೆ ತೇಪೆ ಹಾಕುವ ಕೆಲಸ ಮಾಡಿ ಮುಗಿಸಿದೆ. ಸಿದ್ಧತೆಯ ಭರದಲ್ಲಿ ಇಲ್ಲಿನ ಸ್ಮಾರಕಗಳಿಗೂ ಹಾನಿ ಸಂಭವಿಸಿದೆ.

ಉತ್ಸವದ ಸಂದರ್ಭದಲ್ಲಿ ಮಾತ್ರ ಹಂಪಿಗೆ ಮೇಲಿಂದಮೇಲೆ ಭೇಟಿ ನೀಡುವ ರಾಜಕಾರಣಿಗಳು ನಂತರ ಈ ಕಡೆ ಮುಖ ಹಾಕದಿರುವುದರಿಂದ ಹಂಪಿಯು ಹಾಳು ಕೊಂಪೆ ಎಂಬ ನಕಾರಾತ್ಮಕ ಅಡ್ಡಹೆಸರನ್ನು ಗಳಿಸಿದೆ.

ಸರ್ಕಾರಗಳು ಹಂಪಿಯ ಗತವೈಭವವನ್ನು ಮುಂದಿನ ಪೀಳಿಗೆಗೆ ಉಳಿಸುವ ಹಾಗೂ ಪರಿಚಯಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು, ಉತ್ತರ ಭಾರತ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಸ್ಮಾರಕಗಳನ್ನು ಸಲಹುವಂತೆಯೇ ಸಲಹಿ ಪೋಷಿಸುವ ಅಗತ್ಯವೂ ಇದೆ ಎಂದು ಇತಿಹಾಸ ತಜ್ಞ ಡಾ.ಟಿ.ಎಚ್‌.ಎಂ. ಚಂದ್ರಶೇಖರ ಶಾಸ್ತ್ರಿ ತಿಳಿಸುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.