ADVERTISEMENT

ಕೆಎಂಎಫ್‌ನಿಂದ ಗಿಣ್ಣು ಉತ್ಪಾದನಾ ಘಟಕ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಬಳ್ಳಾರಿ: ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಮಹಾಮಂಡಳವು  ನ್ಯೂಜಿಲಂಡ್ ದೇಶದ ಫಂಟೆರಾ  ಮಿಲ್ಕ್ ಗ್ರೂಪ್‌ನೊಂದಿಗೆ ಬೆಂಗಳೂರಿನಲ್ಲಿ ಚೀಜ್  (ಗಿಣ್ಣು) ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ಈಗಾಗಲೇ  ಫಂಟೆರಾ ಸಂಸ್ಥೆಯೊಂದಿಗೆ ಸಭೆ ಸೇರಿ ಚರ್ಚಿಸಲಾಗಿದ್ದು, ರೂ 80 ಕೋಟಿ ವೆಚ್ಚದಲ್ಲಿ ಸುಮಾರು 10 ಎಕರೆ ನಿವೇಶನದಲ್ಲಿ ಘಟಕವನ್ನು  ನಿರ್ಮಿಸಲಾಗುವುದು ಎಂದರು. ಕೆಎಂಎಫ್ ರೂ 40 ಕೋಟಿಯನ್ನು ವಿನಿಯೋಗಿಸಲಿದೆ.

ಕೆಎಂಎಫ್  ಹಾಲನ್ನು, ಮೂಲ ಪರಿಕರವನ್ನು ನೀಡಲಿದೆ. ಫಂಟೆರಾ ತಾಂತ್ರಿಕ ಸಹಾಯ ನೀಡಿ ಚೀಜ್  ಉತ್ಪನ್ನಗಳನ್ನು ಉತ್ಪಾದಿಸಲಿದೆ. ಈ ಉತ್ಪನ್ನಗಳನ್ನು ವಿಶ್ವದಾದ್ಯಂತ ಮಾರಾಟ ಮಾಡಲಾಗುವುದು.

ಈಗಾಗಲೇ ಚೀಜ್‌ಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಈ ಯೋಜನೆಯು ಸಫಲಗೊಳ್ಳಲಿದೆ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.