ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಉಳಿದ ಸಂಸ್ಕಾರ: ಉಜ್ಜಿನಿ ಶ್ರೀ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 5:25 IST
Last Updated 2 ಜನವರಿ 2012, 5:25 IST

ಕೊಟ್ಟೂರು: ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಂಸ್ಕಾರ, ಧರ್ಮ, ಪರಧರ್ಮ ಸಹಿಷ್ಣುತೆ, ಮಾನವೀಯತೆ ಉಳಿದಿದೆ ಎಂದು ಉಜ್ಜಿನಿ ಸದ್ದರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ  ನುಡಿದರು.

ಸಮೀಪದ ಬೆನಕನಹಳ್ಳಿ ಗ್ರಾಮದಲ್ಲಿ ಹೊಸವರ್ಷದ ಅಂಗವಾಗಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಡ್ಡ ಪಲ್ಲಕ್ಕಿ ಉತ್ಸವದ ನಂತರ ಧರ್ಮ ಸಂದೇಶ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ವೀರಶೈವ ಧರ್ಮ ತನ್ನ ತತ್ವ ಸಿದ್ಧಾಂತದಿಂದಾಗಿ ಜಗತ್ತಿನಾದ್ಯಾಂತ ವ್ಯಾಪಿಸಿದೆ. ಅನ್ಯ ಧರ್ಮೀಯರು ಈ ಧರ್ಮಕ್ಕೆ ಮನಸೋತ್ತಿದ್ದಾರೆ ಎಂದರು. ವೀರಶೈವ ಧರ್ಮದಲ್ಲಿ ಎಷ್ಟೇ ಒಳಪಂಗಡಗಳಿದ್ದರೂ ಅವುಗಳಿಗೆಲ್ಲ ಪಂಚಪೀಠಗಳೇ ಮೂಲ ಎಂದರು ನುಡಿದರು.

ಮಹಿಳೆಯರು ಸಂಸ್ಕಾರ ಹೊಂದಿ ಬೇಕು. ಅಂತಹ ಕುಟುಂಬ ಸಂಸ್ಕಾರ ಕುಟುಂಬವಾಗುವುದರಲ್ಲಿ ಎರಡು ಮಾತ್ತಿಲ್ಲ. ಇದರಿಂದ ಸಂಸ್ಕಾರದ ಜತೆಯಲ್ಲಿ ಸಂಸ್ಕೃತಿಯೂ ಬೆಳೆಯುತ್ತದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ದುಶ್ಚಟ ಗಳು ಹೆಚ್ಚಾಗುತ್ತಿದ್ದು, ಇದರಿಂದ ದೂರಾದಾಗ ಮಾತ್ರ ನಿಮ್ಮ ಸಂಸಾರ ಸುಖವಾಗಿರುತ್ತದೆ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ಶ್ರೀಗಳು ಕರೆ ನೀಡಿದರು.

ಧರ್ಮ ಕಾರ್ಯ ಮಾಡುವ ಮೂಲಕ ಸಮಾಜದಲ್ಲಿ ಧರ್ಮದ ಜಾಗೃತಿ ಮೂಡಿಸಬೇಕು ಎಂದು ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಎಲ್ಲಿಗೂ ಶಿಕ್ಷಣವನ್ನು ಕೊಡಿಸಲು ಗ್ರಾಮಸ್ಥರು ಮುಂದಾಗಬೇಕು. ಇದರಿಂದ ಧರ್ಮ, ಶಿಕ್ಷಣ, ಅಭಿವೃದ್ದಿ ಸಾಧ್ಯ ಎಂದರು.

ರಾಜ್ಯ ಬೀಜ ನಿಗಮದ ನಿರ್ದೇಶಕ ರಾಜೇಂದ್ರ ಪ್ರಸಾದ್ ಮಾತನಾಡಿ, ಅರಣ್ಯ ನಾಶವಾಗುತ್ತಿರುವುದರಿಂದ ಮಳೆ ಕಮ್ಮಿಯಾಗುತ್ತಿದೆ. ಇದರಿಂದ ದುಷ್ಫರಿಣಾಮ ಉಂಟಾಗಲಿದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಮಗು ಹುಟ್ಟಿದರೆ ಅದರ ಹೆಸರಿನಲ್ಲಿ ಗಿಡ ನೆಟ್ಟು ಅರಣ್ಯ ಬೆಳಸುವಂತೆ ಸಲಹೆ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಾರದಾ ರಾಜೇಂದ್ರ ಪ್ರಸಾದ್ ಮತ್ತು ರುದ್ರಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಕೂಡ್ಲಿಗಿ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಪ್ರಶಾಂತ ದೇವರು, ವೀರಪ್ಪಯ್ಯ ಸ್ವಾಮೀಜಿ, ತಾಲೂಕು ಪಂಚಾಯ್ತಿ ಸದಸ್ಯ ಬಿ. ಬಸವರಾಜ್, ಉಜ್ಜಿನಿ ಗ್ರಾ.ಪಂ. ಅಧ್ಯಕ್ಷೆ ಅಮೃತಮ್ಮ,    ಸ್ವಾಗತ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ, ನಿವೃತ್ತ ಶಿಕ್ಷಕ ಶಂಕ್ರಪ್ಪ ಇದ್ದರು.

ಶಿಕ್ಷಕ ಶಂಕ್ರಪ್ಪ ಪ್ರಾಸ್ತಾಮಿಕವಾಗಿ ಮಾತನಾಡಿದರು. ಹನುಮಂತಪ್ಪ ನಿರೂಪಿಸಿದರು. ಸಭೆಯ ಮೊದಲು ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಅಮೇರಿಕದಿಂದ ಡಾ. ರಾಮನಗೌಡ ಮತ್ತು ಚಿತ್ರ ರಾಮನಗೌಡ ಆಗಮಿಸಿದ್ದರು. ವರ್ತಕ ಸೋಮಣ್ಣ, ಶಿಕ್ಷಕ ರಾಜಣ್ಣ ಮುಂತಾದವರು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.

ಶಿಕ್ಷಣಾಧಿಕಾರಿಗಳ ಪೂರ್ವಭಾವಿ ಸಭೆ 8ರಂದು
ಕುಂದಗೋಳ:
ಕರ್ನಾಟಕ ರಾಜ್ಯ `ಬಿ~ ವೃಂದ ಶಿಕ್ಷಣಾಧಿಕಾರಿಗಳ ಒಕ್ಕೂಟದ ರಾಜ್ಯ ಘಟಕದ ಸಮಾವೇಶವು ಜನವರಿ ಮೂರನೆ ವಾರದಲ್ಲಿ ಧಾರವಾಡದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.