ಬಳ್ಳಾರಿ: ಲವ್ ಯು ಆಲ್ ಟ್ರಸ್ಟ್ ವತಿಯಿಂದ ನಗರದ ರಾಘವೇಂದ್ರ ಕಾಲೊನಿ ಎರಡನೇ ಅಡ್ಡರಸ್ತೆಯ ಹದ್ದಿನಗುಂಡು ಪ್ರದೇಶದಲ್ಲಿರುವ ಶಬರಿ ಹಿಲ್ಸ್ ಫುಡ್ ಬಜಾರ್‌ನಲ್ಲಿ ಆರಂಭಿಸಲಾದ ಜನಸ್ನೇಹಿ ಮಾಹಿತಿ ಕೇಂದ್ರಕ್ಕೆ ಬಳ್ಳಾರಿ ಗ್ರಾಮೀಣ ಉಪ ವಿಭಾಗದ ಡಿವೈಎಸ್‌ಪಿ ಎನ್.ರುದ್ರಮುನಿ ಭಾನುವಾರ ಚಾಲನೆ ನೀಡಿದರು.
ಪರಿಸರ ಸ್ನೇಹಿ ಹಾಗೂ ಜನಸ್ನೇಹಿ ಮಹತ್ವಾಕಾಂಕ್ಷೆ ಹೊಂದಿರುವ ಈ ಕೇಂದ್ರದಲ್ಲಿ ಪ್ರತಿಯೊಬ್ಬರೂ ಸದಸ್ಯತ್ವ ಪಡೆಯಬೇಕು. ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವ ಉದ್ದೇಶವಾಗಿದೆ. ಅಲ್ಲದೆ, ಆಯಾ ಕ್ಷೇತ್ರಗಳಲ್ಲಿ ಸದಭಿರುಚಿ ಹೊಂದಿರುವವರಿಗೂ ಟ್ರಸ್ಟ್‌್ ಉತ್ತಮ ಅವಕಾಶ ಕಲ್ಪಿಸಿ ಸೂಕ್ತ ವೇದಿಕೆ ನಿರ್ಮಾಣ ಮಾಡಲಿದೆ ಎಂದು ರುದ್ರಮುನಿ ತಿಳಿಸಿದರು.
ಮಾಹಿತಿ ಕೇಂದ್ರದಲ್ಲಿ ಹಾಗೂ ಖಚಿತ ಮಾಹಿತಿಯನ್ನು ಕೇಂದ್ರದ ಮುಖ್ಯಸ್ಥರು ಒದಗಿಸುವ ಪುಸಕ್ತದಲ್ಲಿ ನೋಂದಣಿ ಮಾಡಬೇಕು ಎಂದು ಟ್ರಸ್ಟ್‌ನ ಮುಖಂಡ ಶಿವಪುರಂ ನಾಗೇಶ ಶೆಟ್ಟಿ ತಿಳಿಸಿದರು.
ವ್ಯಕ್ತಿಯ ಹೆಸರು, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆಗಳು, ವೃತ್ತಿ ಹಾಗೂ ಕೌಶಲ ಪರಿಚಯ, ಸೇವಾ ಮನೋ ಭಾವ, ವಿಷಯ, ವಿಚಾರ, ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು ಲಿಖಿತದ ರೂಪದಲ್ಲಿ ಬರೆಯಬೇಕು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಯುವ ಮುಖಂಡ ಎಚ್.ಅರ್ಜುನ್, ಥಿಯೋಸಫಿಕಲ್ ಸೇವಾ ವಿಭಾಗದ ಅಧ್ಯಕ್ಷ ಬಸವರಾಜ ರೆಡ್ಡಿ, ಟ್ರಸ್ಟ್‌ನ ಖಜಾಂಚಿ ಕಳಿಂಗರಾಜು, ಮಾನವ ಹಕ್ಕುಗಳ ಸಂಘಟನೆ ಗೌಸಿಯಾ, ಶಬರಿ ಕೃಷ್ಣ, ಗೌಡಪ್ಪ, ಮಲ್ಲಿಕಾರ್ಜುನ, ಶಬ್ಬೀರ್, ಮುರುಗೇಶ, ತಾಯಣ್ಣ, ಈರಮ್ಮ, ಸುಮಂಗಳಮ್ಮ, ಮೀನಾ ಕುಮಾರಿ, ರಜಿಯಾ ಬೇಗಂ, ಕೌಲಾ, ಅಂಗವಿಕಲೆ ಶಿವಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.