ADVERTISEMENT

ನಾಡಿನ ಅಭ್ಯುದಯಕ್ಕೆ ಎಲ್ಲರೂ ಶ್ರಮಿಸಬೇಕು: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 6:01 IST
Last Updated 21 ಡಿಸೆಂಬರ್ 2012, 6:01 IST
ಹೊಸಪೇಟೆ: ಸಂಗನಬಸವ  ಸ್ವಾಮೀಜಿಗಳ 75ನೇ ಜನ್ಮದಿನವನ್ನು ಧಾರ್ಮಿಕೋತ್ಸವವಾಗಿ  ಶ್ರದ್ಧಾ ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.
 
ಕಳೆದ 15ದಿನಗಳಿಂದ ನಡೆದ ಶಿರಹಟ್ಟಿ ಫಕೀರ ಮಹಾಸ್ವಾಮಿಗಳ ಪುರಾಣ ಪ್ರವಚನದ ಮಂಗಲ ಕಾರ್ಯಕ್ರಮ ಹಾಗೂ  ಶ್ರೀಗಳ ತುಲಾಭಾರವನ್ನು ಬಳ್ಳಾರಿಯ ಶ್ರೀಧರ ಗಡ್ಡೆಯ ಕೊಟ್ರಯ್ಯನವರ ಸ್ಮರಣಾರ್ಥ ನಂಬೆಮ್ಮ ಹಾಗೂ ಮಕ್ಕಳ ನೆರವೇರಿಸಿ ದರು. ಡಾ.ಮೃತ್ಯುಂಜಯ ರುಮಾಲೆ ಯವರಿಂದ ಬಸವ ಪುರಾಣದ ಮಹತ್ವ ಕುರಿತು ವಿಶೇಷ ಉಪನ್ಯಾಸ ನಡೆಯಿತು.  
 
ಶ್ರೀಗಳು ಆಶೀರ್ವಚನ ನೀಡಿ, ಆಂತರಿಕ ಕಲಹಗಳನ್ನು ತೊಡೆದು ನಾಡಿನ ಅಭ್ಯುದಯಕ್ಕೆ ಎಲ್ಲರೂ ಶ್ರಮಿಸಬೇಕಾಗಿರುವುದು ಅಗತ್ಯವಾಗಿದೆ ಎಂದರು. ಅನೇಕರು ತಮ್ಮ ಭಕ್ತಿ ಸಮರ್ಪಣೆಯನ್ನು ಸಲ್ಲಿಸುವ ಮೂಲಕ ಆಶೀರ್ವಚನ ಪಡೆದರು. 
 
ಒಳಬಳ್ಳಾರಿ ವಿರಕ್ತಮಠದ  ಸಿದ್ಧಲಿಂಗ ಸ್ವಾಮೀಜಿ, ಖೇಡಗಿಯ  ಶಿವಬಸವ  ರಾಜೇಂದ್ರ ಸ್ವಾಮೀಜಿ, ರೋಣ ಗುಲಗಂಜಿಮಠದ  ಗುರುಪಾದ ಸ್ವಾಮೀಜಿ, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ   ಪಾಲ್ಗೊಂಡಿದ್ದರು. 
ಆರ್.ಕೊಟ್ರೇಶ್, ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ, ವಕೀಲರಾದ ಹೆಚ್. ಬಿಡಪ್ಪ, ರೈತ ಮುಖಂಡ ಖಾಜಾ ಹುಸೇನ್ ನಿಯಾಜಿ    ಹಾಜರಿದ್ದರು.  
 
ಹೆಚ್ಚುವರಿ ಸಮಿತಿ ನೇಮಕ
ಹೊಸಪೇಟೆ: ಜಿಲ್ಲಾ ಕಾಂಗ್ರೆಸ್ ಪಕ್ಷ ವನ್ನು ಸದೃಢವಾಗಿ ಬೆಳಸುವ ನಿಟ್ಟಿನಲ್ಲಿ ಹೆಚ್ಚುವರಿ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂದು  ಅಧ್ಯಕ್ಷ ಎಂ.ಪಿ.ರವೀಂದ್ರ ತಿಳಿಸಿದ್ದಾರೆ. 
 
ಪದಾಧಿಕಾರಿಗಳು: ಜಿಲ್ಲಾ ಹೆಚ್ಚುವರಿ ಸಮಿತಿಯ ಉಪಾಧ್ಯಕ್ಷರಾಗಿ ಹೊಸ ಪೇಟೆಯ ಭಾಗ್ಯಲಕ್ಷ್ಮಿ ಭರಾಡೆ, ಹಗರಿ ಬೊಮ್ಮನಹಳ್ಳಿಯ ಗಂಗಾವತಿ ಮಂಜು ನಾಥ, ಪ್ರಧಾನ ಕಾರ್ಯದರ್ಶಿಯಾಗಿ ಸಿರಗುಪ್ಪಾ ಗಂಗಾರಾಂ ಸಿಂಗ್, ಹೊಸಪೇಟೆಯ ಅಯ್ಯೊಳಿ ಮೂರ್ತಿ, ಫಹೀಂ ಬಾಷ, ಹಾಗೂ ಕಾರ್ಯ ದರ್ಶಿಯಾಗಿ  ಹಗರಿ ಬೊಮ್ಮನಹಳ್ಳಿಯ ಸೋಗಿ ಕೊಟ್ರೇಶ, ಕಂಪ್ಲಿ ಎಂಡೆ ಬಸಪ್ಪ, ಹೊಸಪೇಟೆಯ ನಿಂಬಗಲ್ ರಾಮಕೃಷ್ಣ, ಕಮಲಾಪುರದ  ಜಿ.ಕಲಾವತಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂಡೂರಿನ ಎಸ್. ನಾಸಿರುದ್ದಿನ್, ಆಲದಹಳ್ಳಿ ಬಸವ ರಾಜ, ಚಿನ್ನಾಪೂರಗೌಡ, ಕಂಪ್ಲಿಯ ರಾಮರೆಡ್ಡಿ ಚಂದ್ರಶೇಖರ, ವೆಂಕನ ಗೌಡ, ಹಗರಿಬೊಮ್ಮನಹಳ್ಳಿಯ ಪತ್ರೇಶ ಹಿರೇಮಠ, ಎಸ್.ಎಸ್. ವಿಶಾ ಲಾಕ್ಷೀ, ಕಮಲಾಪುರದ ಬಿ. ಅಲ್ಲಾಬಕ್ಷಿ, ಸಿರಗುಪ್ಪಾದ ಚನ್ನಬಸಮ್ಮ, ತೆಕ್ಕಲ ಕೋಟೆಯ ಕೆ.ಎಂ.ಮಮತಾ, ಕೂಡ್ಲಿ ಗಿಯ ಪಿ.ಉಮೇಶ, ಎಚ್. ವೀರ ಭದ್ರಗೌಡ, ಸಕ್ರಿಬಾಯಿ, ಹೊಸಳ್ಳಿಯ ಎಚ್.ಕೆ.ಭಾರತಿ, ಹಡಗಲಿಯ ಕೆ.ಎಸ್.ಶಾಂತನಗೌಡ, ಗಡ್ಡಿಗೌಡ್ರ ಶಿವಪ್ಪ, ಸೇರಿದಂತೆ ಒಟ್ಟು 25 ಜನರನ್ನು ಈ ಹೆಚ್ಚುವರಿ ಸಮಿತಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.