ADVERTISEMENT

ನಿಸರ್ಗ ನಾಶಕ್ಕೆ ಪ್ರತಿಷ್ಠೆ ಕಾರಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 6:10 IST
Last Updated 18 ಫೆಬ್ರುವರಿ 2012, 6:10 IST

ಬಳ್ಳಾರಿ: ವ್ಯಕ್ತಿಗತ ಮೌಲ್ಯಗಳಿಗೆ ಮಹತ್ವ ನೀಡಿದ ಆಧುನಿಕ ಮಾನವ, ತಾನೂ ಪ್ರಕೃತಿಯ ಅವಿಭಾಜ್ಯ ಭಾಗ ಎಂಬುದನ್ನು ಮರೆಯುತ್ತಿರುವುದೇ ನಿಸರ್ಗದ ನಾಶಕ್ಕೆ ಕಾರಣವಾಗಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರು ಬಸವರಾಜ್ ಅಭಿಪ್ರಾಯ ಪಟ್ಟರು.

ಸ್ಥಳೀಯ ವೀರಶೈವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ `ಜೈವಿಕ ವೈವಿಧ್ಯತೆ ಮೇಲೆ ಮಾಲಿನ್ಯದ ಪ್ರಭಾವ: ಜೈವಿಕ ವಿಜ್ಞಾನಗಳ ಪಾತ ್ರ~ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ತಾನೇ ಈ ಪ್ರಕೃತಿಯ ಮಾಲೀಕ ಎಂಬ ಭಾವನೆ ಮನುಷ್ಯನಲ್ಲಿ  ಮೂಡಿ ತೋ,  ಅಂದಿನಿಂದಲೇ ಪ್ರಕೃತಿಯ ಸೌಂದರ್ಯ ವಿರೂಪ ಗೊಂಡು, ಜೀವ ವೈವಿಧ್ಯತೆಯಲ್ಲಿ ಅಸಮತೋಲನ ಉಂಟಾಗಿ, ಆರೋಗ್ಯದ ಮೇಲೆ, ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗತೊಡಗಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಮಾಲಿನ್ಯದಿಂದ ಉಂಟಾಗು ತ್ತಿರುವ ಸಮಸ್ಯೆ ಘೋರ ಸ್ವರೂಪದಲ್ಲಿ ತೆಲೆ ಎತ್ತುತ್ತಿದೆ. ಸಾವಿರಾರು ಪ್ರಭೇದದ ಜೀವಸಂಕುಲ ಅಳಿವಿನ ಅಂಚಿಗೆ ತಲುಪಿದೆ. ಇದಕ್ಕೆ ಮಾನವನ ದುರಾಸೆಯೇ ಕಾರಣ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಜೀವ ವೈವಿಧ್ಯತೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಯುವ ಪೀಳಿಗೆ, ಸರ್ಕಾರ ಮತ್ತು ಸಂಘ- ಸಂಸ್ಥೆಗಳು ಶ್ರಮಿಸುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.


ಅರಿವು ಸಂಘಟನೆಯ ಸಂಚಾಲಕ ಎಸ್.ಪನ್ನರಾಜ್ ಮಾತನಾಡಿ, ಜಾಗತೀಕರಣ ಮತ್ತು ಖಾಸಗೀಕರಣವು ಕೆಲವೇ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಬಹುತೇಕರ ಬದುಕಿಗೆ ಕಂಟಕವಾಗಿದೆ. ಜೀವನದ ಮೌಲ್ಯಗಳು ನಶಿಸಿ ವ್ಯಾಪಾರೀ ಮನೋಭಾವ ಹೆಚ್ಚುತ್ತಿರುವುದು ಪರೋಕ್ಷವಾಗಿ ಜೀವ ವೈವಿಧ್ಯ ಅಸಮತೋಲನಕ್ಕೆ ಕಾರಣವಾಗಿದೆ ಎಂದರು.

ಪ್ರಾಣಿ- ಪಕ್ಷಿಗಳಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ. ಅವುಗಳನ್ನು ರಕ್ಷಿಸದಿದ್ದರೆ ಮಾನವನ ಅಳಿವು ತಪ್ಪಿದಲ್ಲ ಎಂದು ಅವರು ಎಚ್ಚರಿಸಿದರು.ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಸಿ.ಎಂ. ಸತೀಶ್ ಮಾತನಾಡಿ ದರು. ಪ್ರಾಚಾರ್ಯ ಡಾ.ಆರ್. ಮರೇಗೌಡ ಅಧ್ಯಕ್ಷತೆ ವಹಿಸಿದ್ದರು,

ವೀ.ವಿ. ಸಂಘದ ಜೆ.ನೇಪಾಕ್ಷಪ್ಪ, ಸಂಗನಕಲ್ ಹಿಮಂತರಾಜ, ಜಾನೆ ಕುಂಟೆ ಸಣ್ಣಬಸವರಾಜ, ಕೆ. ಬಸವನ ಗೌಡ, ರೂಪನಗುಡಿ ಬಸವ ರಾಜ, ಶರಣಗೌಡ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಧ್ಯಾಪಕರಾದ ಐ. ಸರ್ವೊತ್ತಮ, ಜೆ.ಎಂ. ಪಾಲ್ ಮತ್ತು ವೈ. ಬಸವರಾಜ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಜಿ.ಮನೋಹರ್   ಸ್ವಾಗತಿಸಿದರು. ಡಬ್ಲ್ಯೂ. ಶರಣಪ್ಪ ಪರಿಚಯಿಸಿದರು. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿ ದರು. ಮಾನಸ ಪ್ರಭು ಪ್ರಾರ್ಥಿಸಿದರು. ಸಿದ್ಧರಾಮ ಮುಳಜೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT