ADVERTISEMENT

ಪರಂಪರಾ ತಾಣ ರಕ್ಷಿಸಲು ಯುವಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 9:40 IST
Last Updated 11 ಮಾರ್ಚ್ 2011, 9:40 IST

ಸಿರುಗುಪ್ಪ: ಪ್ರಾಚೀನ ಸ್ಮಾರಕಗಳು ಜನರಿಂದ ಕುರೂಪಗೊಳ್ಳುತ್ತಿವೆ. ಯುವ ವಿದ್ಯಾವಂತರು ತಮ್ಮ ಸುತ್ತಮುತ್ತಲಿನ ಪ್ರಾಚೀನ ಪರಂಪರೆಗಳನ್ನು ರಕ್ಷಿಸುವಲ್ಲಿ ಮುಂದಾಗುವಂತೆ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣರೆಡ್ಡಿ  ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರಾ ಕೂಟ ಮಂಗಳವಾರ ಹಮ್ಮಿಕೊಂಡ ಸ್ಮಾರಕಗಳ ಜಾಗೃತಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು.

ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲರ್ಲ ಹೊಣೆಯಾಗಿದೆಯೆಂದು ಪರಂಪರೆಕೂಟದ ಸಂಚಾಲಕ ಎಚ್.ಈಶಪ್ಪ ಹೇಳಿ, ಪ್ರಾಚೀನ ಸ್ಮಾರಕಗಳು ನಮ್ಮ ಸಂಸ್ಕೃತಿಯ ಅಮೂಲ್ಯ ವಸ್ತುಗಳಾಗಿದ್ದು ಅವುಗಳ ನಾಶದಿಂದ ಗತಕಾಲದ ವೈಭವವನ್ನು ನಾಶಗೊಳಿಸಿದಂತಾಗುತ್ತದೆ ಎಂದರು.

ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಕಾಲೇಜು ಆವರಣದಿಂದ ಪ್ರಾರಂಭಗೊಂಡು,ಗಾಂಧಿ ವೃತ್ತದವರೆಗೆ ಸಾಗಿ, ಪ್ರಾಚೀನ ಪರಂಪರೆಗಳ ಉಳಿವಿನ ಬಗ್ಗೆ ಘೋಷಣೆಗಳನ್ನು ಕೂಗಿದರು.ಈ ಜಾಥಾದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.