ಮರಿಯಮ್ಮನಹಳ್ಳಿ; ನಾಶವಾಗುತ್ತಿರುವ ನಮ್ಮ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಯೋಚಿಸುವ ಅಗತ್ಯವಿದ್ದು, ಪ್ರತಿಯೊಬ್ಬರು ಪರಿಸರದ ಬಗ್ಗೆ ಪ್ರಜ್ಞೆ ಬೆಳಿಸಿಕೊಳ್ಳಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದ ಸಲಹೆ ನೀಡಿದರು.
ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಢಣಾಪುರದ ಬಿಎಂಎಂ ಇಸ್ಪಾತ್‌ನವರು ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಾಚರಣೆ ಹಾಗೂ ಶಾಲಾವರಣಗಳ ಹಸಿರೀಕರಣ ಕಾರ್ಯಕ್ರಮದಲ್ಲಿ ದಿನಾಚರಣೆಯ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಕೆ.ಲಕ್ಷ್ಮಣ್, ಇಂದು ಪರಿಸರ ಇಲ್ಲದಿದ್ದರೆ ನಾವು ಬಾಳಲು ಆಗುತ್ತಿರಲಿಲ್ಲ, ಪರಿಸರದಿಂದಲೇ ಎಲ್ಲಾ ಹಾಗೂ ಎಲ್ಲವೂ ಆಗಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಎಲ್ಲರ ಹೊಣೆಯನ್ನುವುದು ಅರಿತು ಪ್ರತಿಯೊಬ್ಬರು ಮುಂದಾಗಬೇಕಿದೆ. ಅದು ದಿನಾಚರಣೆಯ ಒಂದು ದಿನ ಮಾತ್ರ ಆಗಬಾರದು ನಿತ್ಯ ನೆಡೆಯಬೇಕಿದೆ. ಪರಿಸರ ಇದ್ದರೆ ನಾವು ಹಾಗೂ ನಾಡು ಅಭಿವೃದ್ಧಿ ಆಗಲು ಸಾಧ್ಯವಾಗಿದ್ದು, ಮಕ್ಕಳಲ್ಲಿ ಮೊದಲು ಪರಿಸರದ ಬಗ್ಗೆ ಪ್ರಜ್ಞೆ ಮೂಡಿಸುವದರೊಂದಿಗೆ ಹಿರಿಯರು ಇದರಲ್ಲಿ ಪಾಲ್ಗೊಳ್ಳುವ ಅಗತ್ಯ ಹೆಚ್ಚಿದೆ ಎಂದರು.
ಬಿಎಂಎಂ ಇಸ್ಪಾತ್‌ನ ಬಿ.ಎನ್. ಪಾಟೇಲ್ ಅಧ್ಯಕ್ಷತೆ ವಹಿಸಿದ್ದರು. ಸಂಡೂರು ಪರಿಸರ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ವಿಶ್ವಮೂರ್ತಿ, ಹಿರಿಯ ರಂಗಕಲಾವಿದೆ ಡಾ.ಕೆ.ನಾಗರತ್ನಮ್ಮ, ಪಿಎಸ್‌ಐ ಜಯಪ್ರಕಾಶ್ ಮಾತನಾಡಿದರು.
ಆರಂಭಕ್ಕೂ ಮುಂಚಿತವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಸುಭಾನ್ ಆವರಣದಲ್ಲಿ ಸಸಿ ನೆಡವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಪಿ.ಕಾಸಿಂ ಸಾಹೇಬ್, ಬಿಎಂಎಂನ ಜಿಎಂ ಲಕ್ಷ್ಮಿನಾರಾಯಣ, ವಿ.ವಿ. ರಾಜು, ಕೆ.ಜಿ.ವಿಜಾಪುರೆ, ಪರಿಸರ ಇಲಾಖೆಯ ಪರಿಸರ ಅಧಿಕಾರಿ ಬಿ.ಸಿ. ಶಿವಮೂರ್ತಿ, ಲಕ್ಕಿ ಪೃಥ್ವಿರಾಜ್, ಶಿಕ್ಷಣ ಸಂಯೋಜಿಕಿ ಸುಶೀಲ, ಬಿ.ಎಂ.ಎಸ್. ಮೃತ್ಯುಂಜಯ, ಮಮ್ತಾಜ್ ಬೇಗಂ, ಖಾಜಾಮೊಹೀದ್ದೀನ್, ಪ್ರಭಾಕರ್, ಹನುಮಕ್ಕ, ನಜೀರ್‌ಸಾಬ್, ರಾಮಣ್ಣ, ಸಿಕಂದರ್ ಇತರರು ಉಪಸ್ಥಿತರಿದ್ದರು. ಬಿಎಂಎಂನ ಪರಿಸರ ಅಧಿಕಾರಿ ರವಿಕುಮಾರ್ ಸ್ವಾಗತಿಸಿದರು. ನಂತರ ವಿವಿದ ಶಾಲೆಯ ಮಕ್ಕಳಿಂದ ಪರಿಸರದ ಬಗ್ಗೆ ನೃತ್ಯರೂಪಕ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.