ADVERTISEMENT

`ಪ್ರಾಮಾಣಿಕ ಅಧಿಕಾರಿಗಳ ಬದುಕು ಪಠ್ಯವಾಗಲಿ'

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 5:40 IST
Last Updated 12 ಜೂನ್ 2013, 5:40 IST

ಹಗರಿಬೊಮ್ಮನಹಳ್ಳಿ: ಪ್ರಾಮಾಣಿಕ ಅಧಿಕಾರಿಗಳ ಬದುಕಿನ ಪುಟಗಳನ್ನು ಪಠ್ಯದಲ್ಲಿ ಅಳವಡಿಸುವ ಚಿಂತನೆಯನ್ನು ಶಿಕ್ಷಣ ತಜ್ಞರು ನಡೆಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಕುಂ.ವೀರಭದ್ರಪ್ಪ ಸಲಹೆ ನೀಡಿದರು.

ತಾಲ್ಲೂಕಿನ ತಂಬ್ರಹಳ್ಳಿಯಲ್ಲಿ ಸೋಮವಾರ ಸಾಲ್ಮನಿ ಪ್ರಕಾಶನದ ಪ್ರಕಟಿಸಿದ ಬಿಷ್ಟಪ್ಪ ಸಾಲ್ಮನಿ ಅವರ ಹಳ್ಳಿಯ ದೀಪ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ದೇಶದ ಪ್ರಗತಿಗೆ ಮಾರಕವಾಗಿರುವ ಭ್ರಷ್ಟಾಚಾರ ಪ್ರತಿ ರಂಗದಲ್ಲಿ ಎ್ಲ್ಲಲೆ ಮೀರಿ ಬೆಳೆದಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳ ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ನೇಕಾರ ಕುಟುಂಬದ್ಲ್ಲಲಿ ಹುಟ್ಟಿ ಬೆಳೆದು ಪ್ರಾಮಾಣಿಕತೆಯ ಹೆಜ್ಜೆ ತುಳಿದು ರಾಜ್ಯದಾದ್ಯಂತ ಮನೆ ಮಾತಾಗಿರುವ ಬಿಷ್ಟಪ್ಪರಂತಹ ಅಧಿಕಾರಿಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಭ್ರಷ್ಟಾಚಾರವನ್ನು ಬುಡ ಸಮೇತ ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಹಂತದಲಿ ್ಲಮಕ್ಕಳಿಗೆ ಪ್ರಾಮಾಣಿಕತೆ ಕುರಿತಂತೆ ತಿಳಿಹೇಳುವ ಅವಶ್ಯಕತೆ ಇದೆ. ಆದರೆ, ಈಗಿನ ದುರ್ಬಲವಾಗಿರುವ ಪಠ್ಯ ಕ್ರಮದಿಂದ ಇದು ಸಾಧ್ಯವಿಲ್ಲ. ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆ ಬದಲಾಯಿಸುವ ಅಗತ್ಯವಿದೆ ಎಂದರು.

ಬೆಂಗಳೂರಿನ ಭಾಷಾಂತರ ನಿರ್ದೇಶನಾಲಯದ ಉಪ ನಿರ್ದೇಶಕ ಈರಪ್ಪ ಕಂಬಳಿ ಕೃತಿ ಕುರಿತು ಮಾತನಾಡಿದರು. ನಂದೀಪುರ ಮಹೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಾಹಿತಿ ಹು. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಕ್ಕಿ ಕೊಟ್ರಪ್ಪ, ಜಿ.ಪಂ.ಮಾಜಿ ಸದಸ್ಯ ಎಚ್.ಬಿ. ನಾಗನಗೌಡ, ಪ್ರಕಾಶಕ ಸಾಲ್ಮನಿ ದೇವಿಪ್ರಸಾದ, ಎ.ಎಂ.ಆರ್. ಕೊಟ್ರಯ್ಯ, ರಾಮನಮಲಿ ಉಪಸ್ಥಿತರಿದ್ದರು. ಎಚ್. ಗಂಗಾಧರಗೌಡ ಸ್ವಾಗತಿಸಿದರು. ಒ. ಶೈಲಜಾ ಮತ್ತು ಟಿ. ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.