ADVERTISEMENT

ಬಳ್ಳಾರಿ: ರೈತ ವಿಜ್ಞಾನಿ ಪ್ರಶಸ್ತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 4:25 IST
Last Updated 21 ಮಾರ್ಚ್ 2012, 4:25 IST

ಬಳ್ಳಾರಿ: ರಾಯಚೂರು ಕೃಷಿ ವಿಶ್ವವಿದ್ಯಾಲಯವು 2011-12ನೇ ಸಾಲಿಗಾಗಿ ಕೃಷಿ ಕುರಿತ ಜ್ಞಾನ ಹಾಗು ಅಪಾರ ಅನುಭವದಿಂದ ಅತ್ಯುತ್ತಮ ಸಾಧನೆಗೈದು ಇತರ ರೈತರಿಗೆ ಮಾದರಿಯಾಗಿರುವ ರೈತ/ ರೈತ ಮಹಿಳೆಯರಿಗೆ ರೈತ ವಿಜ್ಞಾನಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.

ಬಳ್ಳಾರಿ, ಬೀದರ್, ಗುಲ್ಬರ್ಗಾ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ರೈತಬಾಂಧವರು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಬರುವ ಏಪ್ರಿಲ್ 3ನೇ ವಾರ ಜರುಗುವ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಶಸ್ತಿ ಫಲಕ ಹಾಗೂ ರೂ 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಆಸಕ್ತರು ಬೀದರ್ ಕೃಷಿ ವಿಜ್ಞಾನ ಕೇಂದ್ರ (ಮೊಬೈಲ್ ದೂರವಾಣಿ ಸಂಖ್ಯೆ 94806- 96318, ಗುಲ್ಬರ್ಗಾ 94806- 96315, ರದ್ದೇವಾಡಗಿ 94806- 96348, ರಾಯಚೂರು 94806- 96314, ಗಂಗಾವತಿ- 94806- 96316, ಹಗರಿ- 94806- 96317, ಭೀಮರಾಯನಗುಡಿ ಕೃಷಿ ವಿಸ್ತರಣಾ ಕೇಂದ್ರ- 94806- 96335, ಲಿಂಗಸೂಗೂರು- 94806- 96334, ಕೊಪ್ಪಳ- 94806- 96319 ಹಾಗೂ ಹಡಗಲಿ- 94806- 96336 ಕಚೇರಿಗಳಿಂದ ಮಾರ್ಚ್ 25ರೊಳಗೆ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 30ರೊಳಗಾಗಿ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ರಾಯಚೂರು- 584102 ಇವರಿಗೆ ಸಲ್ಲಿಸಬೇಕು. ಮಾಹಿತಿಗಾಗಿ ದೂರವಾಣಿ ಸಂಖ್ಯೆ 94806- 96313 ಅಥವಾ ಸ್ಥಿರ ದೂರವಾಣಿ ಸಂಖ್ಯೆ (08532) 220152 ಸಂಪರ್ಕಿಸಬಹುದು ಎಂದು ವಿ.ವಿ.ಯ ವಿಸ್ತರಣಾ ನಿರ್ದೇಶಕ ಡಾ. ಎಸ್.ಎನ್. ಹಂಚಿನಾಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.