ADVERTISEMENT

ಬಸವ ವಸತಿ ಯೋಜನೆ: 5 ಸಾವಿರ ಮನೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 8:25 IST
Last Updated 15 ಜನವರಿ 2012, 8:25 IST

ಹೊಸಪೇಟೆ: ವಿಜಯನಗರ  ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 5 ಸಾವಿರ ಮನೆಗಳು ಮಂಜೂರು ಮಾಡುವುದಾಗಿ  ವಸತಿ ಸಚಿವರು ಒಪ್ಪಿಗೆ ನೀಡಿದ್ದು, ಸರ್ಕಾರದಿಂದ ಅಧಿಕೃತ ಮಂಜೂರಾತಿ ಮಾತ್ರ ಆಗಬೇಕಿದೆ ಎಂದು ಶಾಸಕ ಆನಂದಸಿಂಗ್ ಹೇಳಿದರು.

ಹೊಸೂರು ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಬಸವ ವಸತಿಯಿಂದ 560 ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಲಾ ಮನೆಗೆ ಸರ್ಕಾರ 60 ಸಾವಿರ ಹಣ ನೀಡಲಿದೆ. ಮನೆ ನಿರ್ಮಾಣದ ವೇಳೆ ಕಳಪೆ ಕಾಮಗಾರಿ ಕಂಡರೆ ತಮ್ಮ ಗಮನಕ್ಕೆ ತರಬೇಕೆಂದರು. ಹೊಸೂರು ಗ್ರಾಮದ ಎಲ್ಲಾ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಬದಲಾಯಿಸಲಾಗುವುದು ಎಂದು ಭರವಸೆ ನೀಡಿದರು.

ಚಿತ್ತವಾಡ್ಗಿ ಐಎಸ್‌ಆರ್ ರಸ್ತೆಯಿಂದ ಹೊಸೂರು ಗ್ರಾಮದವರೆಗೆ ನಬಾರ್ಡ್ ಯೋಜನೆಯಿಂದ 1ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು. ಗ್ರಾಮಕ್ಕೆ ತುಂಗಾಭದ್ರಾ ಜಲಾಶಯದಿಂದ ಕುಡಿಯುವ ನೀರು ಒದಗಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.  ಎರ‌್ರೆಬೈಲು ಮಾಗಾಣಿಯಲ್ಲಿ ಬಸವ ಯೋಜನೆಯಡಿ 225 ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಸಮಾರಂಭದಲ್ಲಿ  ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಿತಾ ಆನಂದ್, ನಗರಾವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್. ಕೊಟ್ರೇಶ್, ಬಿಜೆಪಿ ಮುಖಂಡ ಧಮೇಂದ್ರ ಸಿಂಗ್, ಎಪಿಎಂಸಿ ಅಧ್ಯಕ್ಷ ಗೋಸಲ ಭರಮಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅನಂತ ಪದ್ಮನಾಭ, ತಾಲ್ಲೂಕು ಪಂಚಾಯ್ತಿ ಸದಸ್ಯ ಭೀಮನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾಳಗಿ ದುರುಗಮ್ಮ, ಸದಸ್ಯರಾದ ಗಂಗಮ್ಮ, ನಾಗರತ್ನಮ್ಮ, ಲಕ್ಷ್ಮಣ, ದೊಡ್ಡ ಹುಲುಗಪ್ಪ, ಗ್ರಾಮದ ಮುಖಂಡರಾದ ಗಣೇಶ, ಶಿವಮೂರ್ತಿ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.