ADVERTISEMENT

ಬಸ್‌ ಸೌಲಭ್ಯಕ್ಕಾಗಿ ರಸ್ತೆ ಪಕ್ಕದ ಬೇಲಿ ತೆರವುಗೊಳಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 7:35 IST
Last Updated 11 ಜೂನ್ 2018, 7:35 IST

ಕಂಪ್ಲಿ: ತಾಲ್ಲೂಕಿನ ಗಡಿ ಗ್ರಾಮವಾದ ಕಣಿವಿ ತಿಮ್ಮಲಾಪುರದ ರಸ್ತೆ ದುರಸ್ತಿ ಇಲ್ಲದಿರುವುದು ಒಂದೆಡೆಯಾದರೆ ಇಡೀ ರಸ್ತೆ ಅಕ್ಕಪಕ್ಕ ಮುಳ್ಳು ಬೇಲಿ ಗಿಡಗಳು ಬೆಳೆದು ಬಸ್‌ ಸಂಚಾರಕ್ಕೆ ತುಂಬಾ ಅಡ್ಡಿಯಾಗಿತ್ತು.

ಇದರಿಂದ ಸಾರಿಗೆ ಸಂಸ್ಥೆಯವರು ತಮ್ಮ ಗ್ರಾಮಕ್ಕೆ ಬಸ್‌ ಓಡಿಸಲು ಆಗುವುದಿಲ್ಲ ಎಂದು ಉತ್ತರ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಕಣವಿ ತಿಮ್ಮಲಾಪುರ– ರಾಮಸಾಗರ ಮಧ್ಯದ ಸುಮಾರು 6 ಕಿ.ಮೀ ರಸ್ತೆ ಅಕ್ಕಪಕ್ಕದ ಮುಳ್ಳು ಬೇಲಿ ಗಿಡಗಳನ್ನು ಭಾನುವಾರ ಶ್ರಮದಾನದ ಮೂಲಕ ತೆರವುಗೊಳಿಸಿದರು.

ಶ್ರಮದಾನದಲ್ಲಿ ರಮೇಶ್, ಕರವೇ (ನಾರಾಯಣ ಗೌಡ) ಗ್ರಾಮ ಘಟಕ ಅಧ್ಯಕ್ಷ ರುದ್ರೇಶ್, ಗ್ರಾಮದ ಹಿರಿಯರಾದ ಉಳ್ಳೂರು ಪಕ್ಕೀರಪ್ಪ, ಡಂಗಿ ಗಾದಿಲಿಂಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ADVERTISEMENT

‘ಗ್ರಾಮದಿಂದ ನಿತ್ಯ ರಾಮಸಾಗರ ಪ್ರೌಢಶಾಲೆ ಮತ್ತು ಕಂಪ್ಲಿ ಕಾಲೇಜಿಗೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳುತ್ತಿದ್ದು, ಈಗಲಾದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಎಚ್ಚೆತ್ತು ನಮ್ಮ ಗ್ರಾಮಕ್ಕೆ ಬಸ್‌ ಸಂಚರಿಸಲು ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿ ಗೊಲ್ಲರ ವೀರೇಶ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.