
ಕಂಪ್ಲಿ: ದೇವರಿಗೆ ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸಿ ನೈವೇದ್ಯ ಮಾಡುವುದು ಸಾಮಾನ್ಯ, ಆದರೆ ಪಟ್ಟಣದ ಶಿಕಾರಿ ಕಾಲೊನಿಯ ಹಕ್ಕಿ ಪಿಕ್ಕಿ ಬುಡಕಟ್ಟು ಜನಾಂಗದ ಇಕೋತಿಯಾ ಬೆಡಗಿನವರು ಶುಕ್ರವಾರ ತಮ್ಮ ಮನೆ ದೇವರಾದ ಇಕೋತ್ ದೇವಿಗೆ, ಮೃತ ಹಿರಿಯರಿಗೆ ಮತ್ತು ವಿಶೇಷವಾಗಿ ಶಿವನಿಗೆ ಮಾಂಸಹಾರ, ಮದ್ಯ ನೈವೇದ್ಯ ಮಾಡಿ ಹರಕೆ ತೀರಿಸಿದರು.
ಐದು ದಿನಗಳಿಂದ ಶಿಕಾರಿ ಕಾಲೊನಿಯಲ್ಲಿ ಇಕೋತ್ ದೇವಿಯ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರ ವಿಶೇಷ ಪೂಜಾ ಕೈಂಕರ್ಯಗಳು ಮತ್ತು ಭಕ್ತಿ ಸಮರ್ಪಣೆ ವೈಭವದಿಂದ ನೆರವೇರಿದವು.
ಕರ್ನಾಟಕ ರಾಜ್ಯ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ. ಶಿಕಾರಿ ರಾಮು, ಹಕ್ಕಿ ಪಿಕ್ಕಿ ಜನಾಂಗದ ಜಿಲ್ಲಾಧ್ಯಕ್ಷ ಎಚ್.ಪಿ. ಶ್ರೀಕಾಂತ್, ಇಕೋತಿಯಾ ಬೆಡಗಿನ ಪೂಜಾರಿಗಳಾದ ಧರ್ಮಪ್ಪ, ಶಂಕರ, ನಾಗೇಶ, ಮಾರುತಿ, ಛಮ್ಮಾ, ಗಂಗಪ್ಪ, ಕಸ್ತೂರಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.