ADVERTISEMENT

ಹಲಗೆಗೆ ಗತ್ತು ನೀಡುವ ಹನುಮಂತಪ್ಪ

ಸಿದ್ಧರಾಮ ಹಿರೇಮಠ
Published 29 ನವೆಂಬರ್ 2011, 7:40 IST
Last Updated 29 ನವೆಂಬರ್ 2011, 7:40 IST
ಹಲಗೆಗೆ ಗತ್ತು ನೀಡುವ ಹನುಮಂತಪ್ಪ
ಹಲಗೆಗೆ ಗತ್ತು ನೀಡುವ ಹನುಮಂತಪ್ಪ   

ಕುಣಿಯುವ ಹುಮ್ಮಸ್ಸು ನೀಡು ಸಾಂಪ್ರದಾಯಿಕ ವಾದ್ಯಗಳಲ್ಲಿ ಹಲಗೆ ವಾದ್ಯವೂ ಒಂದು. ಚರ್ಮದಿಂದ ಸಿದ್ಧಪಡಿಸಿ, ಎರಡು ತೆಳು ಬಿದಿರಿ ನೊಂದಿಗೆ ಹಲಗೆಯನ್ನು ಬಾರಿಸ ತೊಡಗಿದರೆ ಎಂತಹವರಿಗೂ ಕುಣಿ ಯುವ ಹುಮ್ಮಸ್ಸು ಮೂಡಿ ಬಿಡುತ್ತದೆ.
 
ಅದನ್ನೇ ತಂಡ ಕಟ್ಟಿಕೊಂಡು, ಅದಕ್ಕೊಂದು ಗತ್ತು ಮೂಡಿಸುತ್ತಿರು ವವರಲ್ಲಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆಯಲ್ಲಿರುವ ಹನುಮಂತಪ್ಪ ಒಬ್ಬರಾಗಿದ್ದಾರೆ. ಇವರಿಗೆ ಪ್ರೋತ್ಸಾಹ ನೀಡಿ ಮಾರ್ಗದರ್ಶನ ನೀಡುತ್ತಿರುವವರು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬ್ಯಾಳಿ ವಿಜಯಕುಮಾರಗೌಡ.

ವಂಶಪಾರಂಪರ್ಯವಾಗಿ ಹಲಗೆ ವಾದ್ಯವನ್ನು ನುಡಿಸುತ್ತಿರುವ ತಳವಾರ ಹನುಮಂತಪ್ಪನವರಿಗೆ ಗುರುಗಳೆಂದರೆ ಸಾರೆಪ್ಪರ ತಿಂದಪ್ಪ, ದುರುಗಪ್ಪ, ಸಾಲುಮನಿ ಮೂಗಪ್ಪ, ಬಿ. ಮರಿಯಪ್ಪ, ಉಚ್ಚಂಗಪ್ಪನವರಂಥ ಹಿರಿಯರು ಹಲಗೆ ವಾದ್ಯವನ್ನು ನುಡಿಸುವುದನ್ನು ಕಲಿಸಿದರು. ದೇಸಿ ವಾದ್ಯವಾಗಿರುವ ಹಲಗೆ ಎಲ್ಲ ಕಾಲಕ್ಕೂ ಸೈ ಎನಿಸಿ ಕೊಂಡಿರುವಂತಹದು.

ಮೊಹರಂ ಕುಣಿತದಿಂದ ಹೋಳಿ ಹುಣ್ಣಿಮೆಯ ಮೆರವಣಿಗೆಯವರೆಗೂ ಪಡ್ಡೆಗಳಿಗೆ ಥಟ್ಟನೆ ನೆನಪಾಗುವುದೇ ಹಲಗೆ ವಾದ್ಯ. ಹಲಗೆ ಒಂದೇ ಇರಲಿ, ಹತ್ತೇ ಇರಲಿ ಕುಣಿತ ಆರಂಭಗೊಂಡು ಬಿಡುತ್ತದೆ. ಇಂತಹ ವಾದ್ಯಕ್ಕೆ ಜಾನಪದ ಕಲೆಯ ರೀತಿಯಲ್ಲಿಯೇ ಅದಕ್ಕೊಂದು ಸ್ಥಾನ ದೊರಕಿಸಿ ಕೊಡಬೇಕೆಂದು ಹನುಮಂತಪ್ಪ 20 ವರ್ಷಗಳ ಹಿಂದೆಯೇ ತನ್ನಂತಯೇ ಇತರ 8 ಜನರ ತಂಡವನ್ನು ಕಟ್ಟಿದರು.
 
ಹೀಗೆ ಕಟ್ಟಿದ ತಂಡಕ್ಕೆ ಶ್ರೀ ಮದಗಾಂಬಿಕಾ ಜಾನಪದ ಹಲಗೆ ವಾದ್ಯ ತಂಡವೆಂಬ ಹೆಸರು ಕೊಟ್ಟು, ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. 2006ರಲ್ಲಿ ಬಳ್ಳಾರಿಯಲ್ಲಿ ಏರ್ಪಡಿಸ ಲಾಗ್ದ್ದಿದ ಕನ್ನಡ ಸುವರ್ಣ ಸಾಂಸ್ಕೃತಿಕ ದಿಬ್ಬಣ, ಕನಕ ಜಯಂತಿ, ಹೊಸಪೇಟೆ, ಗಡಿಭಾಗವಾದ ಡಿ.ಹಿರೇಹಾಳ, ಚಿತ್ರದುರ್ಗದ ಶರಣರ ಮೇಳ, ಉಜ್ಜಯಿನಿ ರಥೋತ್ಸವ, ಕೊಟ್ಟೂರಿನ ರಥೋತ್ಸವ ಹೀಗೆ ಹಲವಾರು ರಥೋತ್ಸವ, ಕಾರ್ಯಕ್ರಮಗಳಲ್ಲಿ ತಮ್ಮ ತಂಡದ ಮೂಲಕ ಕೌಶಲ ಮೆರೆದಿದ್ದಾರೆ.

ಜಾನಪದ ಗಾಯಕ ಬಾನಂದೂರು ಕೆಂಪಯ್ಯನವರಿಂದಲೂ ಸೈ ಎನಿಸಿ ಕೊಂಡ ತಂಡ ಇವರದು. 2005ರಲ್ಲಿ ಹೊಸಪೇಟೆ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಗುರು ವಂದನಾ ಮಹೋತ್ಸವದಲ್ಲಿ ಸೇವಾ ಪ್ರಶಸ್ತಿ ಯನ್ನು ತಂಡ ಪಡೆದಿದೆ.

ವಿವಿಧ ಸಂದರ್ಭಗಳಲ್ಲಿ ಪ್ರಶಂಸಾ ಪತ್ರಗಳನ್ನೂ ತಂಡ ಪಡೆದಿದೆ. ಹನುಮಂತಪ್ಪನವರ ತಂಡದಲ್ಲಿ ಪೂಜಾರ ಗಂಗಪ್ಪ, ಹನುಮಂತಪ್ಪ, ದುರುಗಪ್ಪ, ಮದರಾಸ ಬಸಪ್ಪ, ಮೈಲಪ್ಪರ ದುರುಗಪ್ಪ, ಜೆ. ಹುಚ್ಚಂಗಪ್ಪ, ದಂಡೆಪ್ಪರ ಅಂಜಿನಪ್ಪ, ಬೇವಿನಮರದ ಬಸಪ್ಪ ಇದ್ದಾರೆ.

ಈ ತಂಡದಲ್ಲಿ ತರುಣರೂ ಇದ್ದಾರೆ. ತಂಡದ ನಾಯಕತ್ವವನ್ನು ವಹಿಸಿರುವ ಹನುಮಂತಪ್ಪನವರಿಗೆ ಇದೀಗ 65ರ ಹರೆಯ. ಏಕೆಂದರೆ ಯಾವುದೇ ಯುವಕನಿಗೂ ಕಡಿಮೆ ಇಲ್ಲದಂತೆ ಹನುಮಂತಪ್ಪ ಬಿಡುವಿಲ್ಲದಂತೆ ಹಲಗೆಯನ್ನು ನುಡಿಸುತ್ತಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ತಂಡಕ್ಕೆ ಮಾನ್ಯತೆ ನೀಡಿ ಕಾರ್ಯಕ್ರಮಗಳಿಗೆ ಅವಕಾಶ ನೀಡಿದೆ. ಈ ತಂಡಕ್ಕೆ ವಸ್ತ್ರಭೂಷಣ, ವಾದ್ಯ ಪರಿಕರಗಳ ಅವಶ್ಯಕತೆ ಇದೆ. ಹನುಮಂತಪ್ಪ ಅವರ ಹಲಗೆ ವಾದ್ಯ ತಂಡವನ್ನು ಸಂಪರ್ಕಿಸಲು ಬ್ಯಾಳಿ ವಿಜಯಕುಮಾರ ಗೌಡ (94496 22707) ಅವರನ್ನು ಸಂಪರ್ಕಿಸ ಬಹುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.