ADVERTISEMENT

ಹೊಸಪೇಟೆಯಲ್ಲಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 4:30 IST
Last Updated 6 ಜೂನ್ 2011, 4:30 IST
ಹೊಸಪೇಟೆಯಲ್ಲಿ ಸತ್ಯಾಗ್ರಹ
ಹೊಸಪೇಟೆಯಲ್ಲಿ ಸತ್ಯಾಗ್ರಹ   

ಹೊಸಪೇಟೆ: ಯೋಗಗುರು ಬಾಬಾ ರಾಮದೇವ್ ಅವರ ಕರೆಯ ಮೇರೆಗೆ ಭ್ರಟಾಚಾರ ನಿರ್ಮೂಲನೆಗೆ ಆಗ್ರಹಿಸಿ ಸ್ಥಳೀಯ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ನಗರದಲ್ಲಿ ಶನಿವಾರ ಉಪವಾಸ ಸತ್ಯಾಗ್ರಹ ಆರಂಭಿಸಲಾ ಯಿತು.

ಸ್ಥಳೀಯ ಗಾಂಧಿ ಪ್ರತಿಮೆಯ ಬಳಿ ಕಾರ್ಯಕರ್ತರು ಹಾಗೂ ಸಾರ್ವಜ ನಿಕರು ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಬೆಳಿಗ್ಗೆ ಬೃಹತ್ ಜನಜಾಗೃತಿ ಮೆರವಣಿಗೆ ನಡೆಸಿದರು.

ಹಿರಿಯ ಗಾಂಧಿವಾದಿ, ಕನ್ನಡ ಪಂಡಿತ ಕೆ.ನಾರಾಯಣ ಭಟ್ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ತಹಸೀಲ್ದಾರ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ ಸತ್ಯಾಗ್ರಹ ಆರಂಭಿಸಲಾಯಿತು.

ಯೋಗ ಸಮಿತಿಯ ಉತ್ತರ ಕರ್ನಾಟಕ ಸಂಚಾಲಕ ಭವರ್‌ಲಾಲ್ ಆರ್ಯ, ಕೆ. ಉದಯಶಂಕರ್, ಎಚ್.ಆರ್. ಕೋಟೆ, ಬಾಬು ರಾಜೇಂದ್ರಪ್ರಸಾದ್, ನಗರಸಭೆ ಅಧ್ಯಕ್ಷ ಅಮ್ಜದ್ ಮಾತ ನಾಡಿ, ಭ್ರಷ್ಟಾಚಾರವನ್ನು ಸಂಪೂರ್ಣ ವಾಗಿ ನಿರ್ಮೂಲನೆ ಮಾಡಬೇಕು ಎಂದು ಆಗ್ರಹಿಸಿ, ವಿದೇಶಗಳ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ಮರಳಿ ತರುವಂತೆ ಕೋರಿ ನಡೆಸಿರುವ ಈ ಸತ್ಯಾಗ್ರಹಕ್ಕೆ ಎಲ್ಲರ ಬೆಂಬಲ ಅಗತ್ಯ. ಬೇಡಿಕೆ ಈಡೇರುವವರೆಗೆ ಸತ್ಯಾಗ್ರಹ ಮುಂದುವರಿಯಲಿದೆ ಎಂದರು.

ಅನೇಕ ಸಂಘ-ಸಂಸ್ಥೆಗಳು ಈ ಹೋರಾ ಟಕ್ಕೆ ಬೆಂಬಲ ನೀಡಿ ನಿತ್ಯವೂ ನಡೆ ಯುವ ಸರದಿ ಸತ್ಯಾಗ್ರಹದಲ್ಲಿ ಭಾಗ ವಹಿಸಬೇಕು ಎಂದು ಕೋರಿದರು. ಮಹಾವೀರ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿ/ ವಿದ್ಯಾರ್ಥಿ ನಿಯರು  ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.