ಹೊಸಪೇಟೆ: ‘ಭಾಷೆಯ ಆಳವನ್ನು ಅರ್ಥೈಸಿಕೊಳ್ಳದ ಮೇಲ್ನೋಟದ ಶಬ್ದಗಳ ಧ್ವನಿಗೆ ಅರ್ಥ ಬರುವುದಿಲ್ಲ. ಏಕೆಂದರೆ ಧ್ವನಿ ಯಾವುದೇ ಮುಲಾ ಜಿಲ್ಲದೆ ನಡೆಯುವ ಒಂದು ಕ್ರಿಯೆ’ ಎಂದು ಬಹುಭಾಷಾ ವಿದ್ವಾಂಸ ಡಾ.ವಿಲಿಯಂ ರಾಬರ್ಟ್ ಡಿಸಿಲ್ವಾ ಅಭಿಪ್ರಾಯ ಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡ ಭಾಷಾ ಅಧ್ಯಯನ ವಿಭಾಗ ಕೆಎಲ್‌ಇ ಸಂಸ್ಥೆ ದತ್ತಿ ನಿಧಿಯ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಭಾಷಾ ವಿಜ್ಞಾನ ಮತ್ತು ಇತರ ಜ್ಞಾನ ಶಿಸ್ತು ಗಳು’ ಕುರಿತು ಉಪನ್ಯಾಸ ನೀಡಿದರು.
‘ದ್ರಾವಿಡ ಭಾಷೆಗಳು ಚಾಲ್ತಿಯಲ್ಲಿರುವ ಭಾಷೆಗಳು, ದಕ್ಷಿಣ ಏಷ್ಯಾದ ಭಾಷೆಗಳು ಅಂದರೆ ಬುಡಕಟ್ಟು ಭಾಷೆಗಳನ್ನು ಆಧರಿಸಿಯೆ ‘ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ’ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಸಂಸ್ಕೃತ, ಪ್ರಾಕೃತ, ಅರೇಬಿಕ್, ಪರ್ಷಿಯನ್ ನಂತಹ ಹಲವಾರು ಭಾಷೆಗಳಲ್ಲಿ ಬರಹ ಮತ್ತು ಉಚ್ಛಾರ ಬೇರೆ ಆಗಿರುತ್ತದೆ’ ಎಂದು ಹೇಳಿದರು.
ಡಾ. ಅಶೋಕಕುಮಾರ ರಂಜೇರೆ, ಡಾ. ಮೋಹನ ಕುಂಟಾರ್, ಡಾ. ಸುಬ್ಬಣ್ಣ ರೈ, ಸಿ. ವೆಂಕಟೇಶ್, ಡಾ. ಶೈಲಜಾ ಹಿರೇಮಠ, ಡಾ.ಎಂ.ಉಷಾ, ಡಾ.ಶಿವಾನಂದ ವಿರಕ್ತಮಠ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿ ತರಿದ್ದರು. ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಸಾಂಬಮೂರ್ತಿ ಅವರು ಸ್ವಾಗತಿಸದರು. ಸಂಶೋಧನಾ ವಿದ್ಯಾರ್ಥಿ ಎಚ್. ಹುಲುಗಪ್ಪ ನಿರೂಪಿಸಿದರು. ವಿಭಾಗದ ಅಧ್ಯಾಪಕ ಡಾ.ಪಿ. ಮಹಾದೇವಯ್ಯ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.