ADVERTISEMENT

‘ಬಂದೂಕು ಸಂಸ್ಕೃತಿಯಿಂದ ಸೌಹಾರ್ದತೆಗೆ ಧಕ್ಕೆ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 5:18 IST
Last Updated 12 ಸೆಪ್ಟೆಂಬರ್ 2013, 5:18 IST

ಹಗರಿಬೊಮ್ಮನಹಳ್ಳಿ: ಕೆಲವು ಧರ್ಮಗಳು, ತಮ್ಮದೇ ಧರ್ಮದ ದುರ್ಬಲ ಮನಸ್ಸಿನವರನ್ನು ತ್ರಿಶೂಲ, ಬಂದೂಕು ಹಿಡಿಯುವಂತೆ ಪ್ರೇರೇಪಿಸುವ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ದೇಶದ ಕೋಮು ಸಾಮರಸ್ಯವನ್ನು ಹಾಳುಗೆಡುವುತ್ತದೆ. ಅಲ್ಲದೆ ಪರಸ್ಪರ ಸಂದೇಹಿಸುವ ವಾತಾವರಣ ನಿರ್ಮಿಸಿದೆ ಎಂದು ಸಂಡೂರಿನ ವಿರಕ್ತಮಠದ ಪ್ರಭುದೇವ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ  ನಡೆದ ಜಗಜ್ಯೋತಿ ಬಸವೇಶ್ವರ ಪುರಾಣ ಪ್ರವಚನದ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವೀಯತೆ, ಅಂತಃಕರಣ, ಪ್ರೀತಿ, ಸಹೋದರತೆ, ವೈಚಾರಿಕ ಮನೋಭಾವ ಮತ್ತು ಅಹಿಂಸಾ ತತ್ವ ಪ್ರತಿಪಾದಿಸುವ ಲಿಂಗಾಯತ ಧರ್ಮ ಸಮಾಜದ ವೈಚಾರಿಕ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಲಿಂಗಾಯತ ಧರ್ಮ ಇತರ ಧರ್ಮಗಳಿಗಿಂತ ಭಿನ್ನವಾಗಿದೆ. ಶ್ರೇಷ್ಠ ಧರ್ಮವಾಗಿದೆ ಎಂದು ನುಡಿದರು.

ಹಂಪಸಾಗರದ ಮಹಾದೇವ ತಾತನವರ ಉಘಾಮಠದ ಪಂಡಿತ ಶಿವಲಿಂಗ ಸ್ವಾಮೀಜಿ ಮಾತನಾಡಿದರು. ಅಕ್ಕಿ ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಬಸವಾಶ್ರಮದ ಮಾತಾ ಬಸವಾಂಜಲಿ 70 ಜನರಿಗೆ ಲಿಂಗಧಾರಣೆ ನೆರವೇರಿಸಿದರು. ನಂದೀಪುರ ಮಹೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಸವಾಶ್ರಮದ ಯೋಗಪಟುಗಳು ಯೋಗ ಪ್ರದರ್ಶನ ನಡೆಸಿಕೊಟ್ಟರು. ಎಚ್.ಬಿ. ಗಂಗಾಧರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಜಿ.ಪಂ. ಮಾಜಿ ಸದಸ್ಯ ಅಕ್ಕಿ ತೋಟೇಶ್, ಮುಖಂಡರಾದ ಜಿ. ಬಸವರಾಜಪ್ಪ, ಬಿ. ತೋಟಪ್ಪ, ಟಿ. ವೆಂಕಣ್ಣ, ಜಿ. ರೆಹಮಾನ್‌ಸಾಬ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಣಕಾರ ಕೊಟ್ರೇಶ್, ಡಾ. ಯು. ದ್ಯಾಮಜ್ಜ, ಬಸವ ಯೋಗಾಶ್ರಮದ ಗುರು ಮಹಾಂತೇಶ ಪಾಟೀಲ, ಅಕ್ಕಿ ಬಸವರಾಜ್, ಉಪ ತಹಸೀಲ್ದಾರ ರೇಣುಕಮ್ಮ, ಪ್ರಾಚಾರ್ಯ ಎನ್.ಜೆ. ಸತೀಶ್, ವೈದ್ಯಾಧಿಕಾರಿ ಡಾ. ಭಾಸ್ಕರ್, ಪಿಎಸ್‌ಐ ನಾಗಪ್ಪ, ಪಿಡಿಒ ತೋಟಪ್ಪ ಹಾಗೂ ಕಡ್ಡಿ ಚನ್ನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾರದಾ ಮಂಜುನಾಥ ಪ್ರಾರ್ಥಿಸಿದರು. ಶಿಕ್ಷಕ ಎಂ.ಎಸ್. ಕಲ್ಗುಡಿ ಸ್ವಾಗತಿಸಿದರು. ಪೀಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಪಟ್ಟಣಶೆಟ್ಟಿ ನಿರೂಪಿಸಿದರು. ಮಂಜುನಾಥ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.