ADVERTISEMENT

ಹೊಸಪೇಟೆ: ಒಂದುವರೆ ಕೆ.ಜಿ. ಬೆಳ್ಳಿ ಆಭರಣ ವಶಕ್ಕೆ

ಜೈಲಿನಲ್ಲಿದ್ದುಕೊಂಡೇ ಕಳವಿಗೆ ಸಂಚು ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 14:40 IST
Last Updated 17 ಅಕ್ಟೋಬರ್ 2019, 14:40 IST
ವಶಪಡಿಸಿಕೊಂಡಿರುವ ಚಿನ್ನಾಭರಣಗಳನ್ನು ಪೊಲೀಸರು ಗುರುವಾರ ಮಾಧ್ಯಮದವರ ಎದುರು ಪ್ರಸ್ತುತಪಡಿಸಿದರು
ವಶಪಡಿಸಿಕೊಂಡಿರುವ ಚಿನ್ನಾಭರಣಗಳನ್ನು ಪೊಲೀಸರು ಗುರುವಾರ ಮಾಧ್ಯಮದವರ ಎದುರು ಪ್ರಸ್ತುತಪಡಿಸಿದರು   

ಹೊಸಪೇಟೆ: ಬಳ್ಳಾರಿ ಜೈಲಿನಲ್ಲೇ ಉಳಿದುಕೊಂಡು ಕಳವು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆಇಲ್ಲಿನ ಉಪವಿಭಾಗ ಪೊಲೀಸರು ಗುರುವಾರ 1 ಕೆ.ಜಿ. 380 ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧಿಸಿ ಇದುವರೆಗೆ ಒಟ್ಟು 15 ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರು ನೀಡಿದ ಮಾಹಿತಿ ಆಧರಿಸಿ ಮೂವರು ಖರೀದಿದಾರರಿಂದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. 1 ಕೆ.ಜಿ. 225 ಗ್ರಾಂ ಚಿನ್ನಾಭರಣ, ₹16 ಲಕ್ಷ ನಗದು, ಎರಡು ದ್ವಿಚಕ್ರ ವಾಹನ, ₹62 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ತೆಗೆದುಕೊಂಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ವೈ.ಎಸ್ಪಿ. ವಿ. ರಘುಕುಮಾರ, ‘2017ರಿಂದ 2019ರ ವರೆಗೆ ನಡೆದ ಐದು ಕಳವು ಪ್ರಕರಣಗಳಲ್ಲಿ ಈ ಆರೋಪಿಗಳು ಶಾಮಿಲಾಗಿದ್ದಾರೆ. ಇತ್ತೀಚೆಗೆ ನಡೆದ ಕಳವಿನಲ್ಲೂ ಇವರ ಕೈವಾಡ ಇರುವ ಶಂಕೆಯಿದ್ದು, ತನಿಖೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.

ADVERTISEMENT

‘ಆರೋಪಿಗಳ ಪತ್ತೆಗೆ ಸಿ.ಪಿ.ಐ.ಗಳಾದ ಪ್ರಸಾದ್‌ ಗೋಖಲೆ, ಸಿದ್ದೇಶ್ವರ ಹಾಗೂ ಪರಸಪ್ಪ ಭಜಂತ್ರಿ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು. ಒಟ್ಟು 40 ಸಿಬ್ಬಂದಿ ಇದರಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಮಾಹಿತಿ ನೀಡಿದರು.

ಜೈಲಿನಲ್ಲಿದ್ದುಕೊಂಡೇ ಶೋಯೆಬ್‌, ಶ್ಯಾಂ ಮತ್ತು ಹನುಮಂತ ಕಳವಿಗೆ ಸಂಚು ರೂಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.