ADVERTISEMENT

ಹರಪನಹಳ್ಳಿ: 30 ಮೊಬೈಲ್ ಫೋನ್‌ ವಾರಸುದಾರರಿಗೆ ವಾಪಸ್‌

​ಪ್ರಜಾವಾಣಿ ವಾರ್ತೆ
Published 23 ಮೇ 2025, 14:39 IST
Last Updated 23 ಮೇ 2025, 14:39 IST
ವಿವಿಧೆಡೆ ಕಳವಾಗಿದ್ದ 30 ಮೊಬೈಲ್‌ ಫೋನ್‌ಗಳನ್ನು ಹರಪನಹಳ್ಳಿ ಪೊಲೀಸರು ಜಪ್ತಿ ಮಾಡಿದ್ದಾರೆ.‌ ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್ಐ ಶಂಭುಲಿಂಗ ಹಿರೇಮಠ ಈ ಸಂದರ್ಭದಲ್ಲಿ ಇದ್ದರು
ವಿವಿಧೆಡೆ ಕಳವಾಗಿದ್ದ 30 ಮೊಬೈಲ್‌ ಫೋನ್‌ಗಳನ್ನು ಹರಪನಹಳ್ಳಿ ಪೊಲೀಸರು ಜಪ್ತಿ ಮಾಡಿದ್ದಾರೆ.‌ ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್ಐ ಶಂಭುಲಿಂಗ ಹಿರೇಮಠ ಈ ಸಂದರ್ಭದಲ್ಲಿ ಇದ್ದರು   

ಹರಪನಹಳ್ಳಿ: ಪಟ್ಟಣ ಒಳಗೊಂಡು ತಾಲ್ಲೂಕಿನ ವಿವಿಧೆಡೆ ಕಳುವಾಗಿದ್ದ 30 ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಶುಕ್ರವಾರ ವಾರಸುದಾರರಿಗೆ ಒಪ್ಪಿಸಲಾಯಿತು

ಹರಪನಹಳ್ಳಿ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣ, ಸಂತೆ ಮಾರುಕಟ್ಟೆಗಳ‌ ವ್ಯಾಪ್ತಿಯಲ್ಲಿ ಹಲವು ಮೊಬೈಲ್‌ ಫೋನ್‌ಗಳು ಕಳವಾಗಿದ್ದವು. ಒಟ್ಟು ₹ 4 ಲಕ್ಷ ಮೌಲ್ಯದ ಮೊಬೈಲ್‌ ಫೋನ್‌ಗಳನ್ನು‌ ಪತ್ತೆ ಹಚ್ಚಿ ಮಾಲೀಕರಿಗೆ ವಿತರಿಸಲಾಯಿತು ಎಂದು ಡಿವೈಎಸ್‌ಪಿ ವೆಂಕಟಪ್ಪ ನಾಯಕ ಮಾಹಿತಿ ನೀಡಿದರು.

ಸಿಪಿಐ‌ ಮಹಾಂತೇಶ್ ಸಜ್ಜನ್, ಪಿಎಸ್ಐ ಶಂಭುಲಿಂ‌ಗ ಹಿರೇಮಠ ಮಾರ್ಗದರ್ಶನದಲ್ಲಿ‌ ಸಿಇಐಆರ್ ತಂತ್ರಾಂಶದ‌ ಮೂಲಕ ಮೊಬೈಲ್ ಫೋನ್‌ ಪತ್ತೆ ಹಚ್ಚುವ ಕಾರ್ಯಾಚರಣೆ ತಂಡದಲ್ಲಿ ಸಿಬ್ಬಂದಿ ಕೆ.ಎಂ. ಆನಂದ, ಯು.ನಾಗರಾಜ, ಕೆ.ಎಚ್.ಎಂ.ರಾಜಶೇಖರ, ಗುರುಪ್ರಸಾದ್, ಕುಮಾರ ನಾಯ್ಕ‌ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.