ADVERTISEMENT

ಸುಗಮ ಸಂಚಾರಕ್ಕೆ ‘ಪಂಚಸೂತ್ರ’

ಕೆ.ನರಸಿಂಹ ಮೂರ್ತಿ
Published 10 ಜನವರಿ 2018, 7:07 IST
Last Updated 10 ಜನವರಿ 2018, 7:07 IST
ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದ ಸಮೀಪ ಮಂಗಳವಾರ ಇಂಧನ ಖಾಲಿಯಾದ ಆಟೋರಿಕ್ಷಾವನ್ನು ಮತ್ತೊಂದು ರಿಕ್ಷಾ ಚಾಲಕ ಕಾಲಿನಿಂದ ತಳ್ಳುತ್ತಾ ಸಾಗಿದ್ದ ದೃಶ್ಯ. ಚಿತ್ರ: ಸತೀಶ್‌ ಮುರಾಳ್
ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದ ಸಮೀಪ ಮಂಗಳವಾರ ಇಂಧನ ಖಾಲಿಯಾದ ಆಟೋರಿಕ್ಷಾವನ್ನು ಮತ್ತೊಂದು ರಿಕ್ಷಾ ಚಾಲಕ ಕಾಲಿನಿಂದ ತಳ್ಳುತ್ತಾ ಸಾಗಿದ್ದ ದೃಶ್ಯ. ಚಿತ್ರ: ಸತೀಶ್‌ ಮುರಾಳ್   

ಬಳ್ಳಾರಿ: ನಗರದಲ್ಲಿ ವಾಹನಗಳ ಸುಗಮ ಸಂಚಾರ ಮತ್ತು ಸಾರ್ವಜನಿಕರ ಪ್ರಾಣ ರಕ್ಷಣೆ ಸಲುವಾಗಿ ತುರ್ತಾಗಿ ಪಂಚಸೂತ್ರದಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಸೂಕ್ತ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಚೇತನ್‌ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಅವರು ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸೋಮವಾರ ಸಂಜೆ ಸಮನ್ವಯ ಸಭೆಯನ್ನೂ ನಡೆಸಿದ್ದಾರೆ.

ನಗರದ ರಸ್ತೆ ಮತ್ತು ವೃತ್ತಗಳಲ್ಲಿ ಜನದಟ್ಟಣೆ ಮತ್ತು ವಾಹನ ದಟ್ಟಣೆಯಿಂದ ಎದುರಾಗುತ್ತಿರುವ ಸಮಸ್ಯೆ ನಿವಾರಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳ ಕಡೆಗೂ ಅವರು ಗಮನ ಸೆಳೆದಿದ್ದಾರೆ.

ಹೊರ ವರ್ತುಲ ರಸ್ತೆ: ಸದ್ಯ ಬಳ್ಳಾರಿ–ಹೊಸಪೇಟೆ ಮತ್ತು ಬಳ್ಳಾರಿ–ಅನಂತಪುರ ಮಾರ್ಗದಲ್ಲಿ ಸಂಚರಿಸುವವರಿಗೆ ಮಾತ್ರ ಹೊರವರ್ತುಲ ರಸ್ತೆಗಳ ಸೌಕರ್ಯವಿದೆ. ನಗರದಿಂದ ಸಿರುಗುಪ್ಪ ಮತ್ತು ಮೋಕಾ ಕಡೆಗೆ ತೆರಳುವ ಭಾರಿ ವಾಹನಗಳು ನಗರದ ಮೂಲಕವೇ ಸಂಚರಿಸುತ್ತಿವೆ.

ADVERTISEMENT

* * 

ಎಸ್ಪಿ ಅವರು ನೀಡಿರುವ ಸೂತ್ರಗಳನ್ನು ಜಾರಿಗೆ ತರಲಾಗುವುದು. ಅದಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗುವುದು
–ಜೆ.ಆರ್‌.ಜೆ.ದಿವ್ಯಪ್ರಭು, ಪಾಲಿಕೆ ಆಯುಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.