ADVERTISEMENT

‘ಶ್ರಮ ಸಂಸ್ಕೃತಿಯ ಪ್ರತಿನಿಧಿ’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 9:14 IST
Last Updated 2 ಫೆಬ್ರುವರಿ 2018, 9:14 IST
ಬಳ್ಳಾರಿಯಲ್ಲಿ ಗುರುವಾರ ಮಡಿವಾಳ ಮಾಚಿದೇವರ ಚಿತ್ರಪಟಕ್ಕೆ ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಪಿ.ದೀನಾ ಪುಷ್ಪನಮನ ಸಲ್ಲಿಸಿದರು. ಲೇಖಕ ಕೆ.ಬಿ.ಸಿದ್ದಲಿಂಗಪ್ಪ ಇದ್ದಾರೆ
ಬಳ್ಳಾರಿಯಲ್ಲಿ ಗುರುವಾರ ಮಡಿವಾಳ ಮಾಚಿದೇವರ ಚಿತ್ರಪಟಕ್ಕೆ ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಪಿ.ದೀನಾ ಪುಷ್ಪನಮನ ಸಲ್ಲಿಸಿದರು. ಲೇಖಕ ಕೆ.ಬಿ.ಸಿದ್ದಲಿಂಗಪ್ಪ ಇದ್ದಾರೆ   

ಬಳ್ಳಾರಿ: ‘ಕಾಯಕ ನಿಷ್ಠೆಗೆ ಹೆಸರಾದ ಮಡಿವಾಳ ಮಾಚಿದೇವ ತಳಸಮುದಾಯದ ಶ್ರಮಸಂಸ್ಕೃತಿಯ ಶ್ರೇಷ್ಠ ಪ್ರತಿನಿಧಿಯಾಗಿದ್ದರು’ ಎಂದು ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಪಿ.ದೀನಾ ಬಣ್ಣಿಸಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮಾಚಿದೇವ ಕಾಯಕನಿಷ್ಠೆಯ ಮಹಾ ಸಂತ. ಅವರ ವಚನಗಳನ್ನು ಎಲ್ಲರೂ ಓದಬೇಕು’ ಎಂದರು. ಲೇಖಕ ಕೆ.ಬಿ.ಸಿದ್ದಲಿಂಗಪ್ಪ ವಿಶೇಷ ಉಪನ್ಯಾಸ ನೀಡಿದರು. ಖಾಸೀಂ ಸಾಹೇಬ್ ಮತ್ತು ಸಂಗಡಿಗರು ವಚನಗಳನ್ನು ಹಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಪ್ರೊಬೆಷನರಿ ಉಪವಿಭಾಗಾಧಿಕಾರಿ ಧರ್ಮಪಾಲ, ಮಡಿವಾಳರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಧನುಂಜಯ್ ಹಮಲ್, ಕಾರ್ಯದರ್ಶಿ ರಾಮಾಂಜಿನೇಯ, ಮುಖಂಡರಾದ ಹೊನ್ನೂರಪ್ಪ, ವೆಂಕಟೇಶ  ಇದ್ದರು.

ADVERTISEMENT

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಮಾಚಿದೇವರ ಚಿತ್ರಪಟದ ಮೆರವಣಿಗೆಗೆ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ದೀನಾ ಚಾಲನೆ ನೀಡಿದರು. ಮೇಯರ್‌ ಜಿ.ವೆಂಕಟರಮಣ, ಪ್ರೊಬೆಷನರಿ ಎ.ಸಿ ಗುರುನಂದನ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.