ADVERTISEMENT

ಗುರು ಕಾಲೇಜಿಗೆ ಶೇ 85 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 8:54 IST
Last Updated 16 ಏಪ್ರಿಲ್ 2019, 8:54 IST
ಅಮೂಲ್ಯಶೇ 91.16
ಅಮೂಲ್ಯಶೇ 91.16   

ಹೊಸಪೇಟೆ: ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಗುರು ಪದವಿ ಪೂರ್ವ ಕಾಲೇಜಿಗೆ ಶೇ 85 ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗದಲ್ಲಿ ಅಮೂಲ್ಯ 547 ಅಂಕ ಗಳಿಸಿ ಇಡೀ ಕಾಲೇಜಿಗೆ ಪ್ರಥಮ ಬಂದಿದ್ದಾರೆ.ಹಿಮಂತ್ ರಾಜ್ 520, ಐ. ಬಸವರಾಜ 527, ನಂದಿನಿ ನಾಯ್ಕ 520 ಅಂಕ ಗಳಿಸಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಆಕಾಂಕ್ಷ ದಾಸ್ 600ಕ್ಕೆ 546 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮೇಘನಾ 534, ಶಿಫಾ ತನ್‍ಸೀನ್ ಬಾವಾಜಿ 510 ಹಾಗೂ ಯಶಸ್ವಿನಿ 504 ಅಂಕ ಗಳಿಸಿದ್ದಾರೆ.

ADVERTISEMENT

ವಿಜ್ಞಾನ ವಿಭಾಗದಲ್ಲಿ ಒಟ್ಟು 120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 49 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯ ಡೀನ್‌ ಡಿ. ಪ್ರಸನ್ನಾಂಜನೇಯಲು, ಪ್ರಾಚಾರ್ಯ ಜಿ. ಮಲ್ಲಿಕಾರ್ಜುನ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.