ADVERTISEMENT

ಮೆಕ್ಕಾ–ಮದೀನಾಗೆ 94 ಜನ ಪಯಣ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 14:09 IST
Last Updated 14 ಅಕ್ಟೋಬರ್ 2019, 14:09 IST
ಮೆಕ್ಕಾ ಮತ್ತು ಮದೀನಾಗೆ ಪಯಣ ಬೆಳೆಸಿದ ತಂಡಕ್ಕೆ ಸೋಮವಾರ ಹೊಸಪೇಟೆಯಲ್ಲಿ ಬೀಳ್ಕೊಡಲಾಯಿತು
ಮೆಕ್ಕಾ ಮತ್ತು ಮದೀನಾಗೆ ಪಯಣ ಬೆಳೆಸಿದ ತಂಡಕ್ಕೆ ಸೋಮವಾರ ಹೊಸಪೇಟೆಯಲ್ಲಿ ಬೀಳ್ಕೊಡಲಾಯಿತು   

ಹೊಸಪೇಟೆ: ಮೆಕ್ಕಾ ಮತ್ತು ಮದೀನಾಗೆ ನಗರದ 94 ಜನ ಸೋಮವಾರ ಪ್ರಯಾಣ ಬೆಳೆಸಿದರು. ಇದು ನಗರದಿಂದ ಪಯಣ ಬೆಳೆಸಿದ 22ನೇ ತಂಡವಾಗಿದೆ. ಎಲ್ಲ ಯಾತ್ರಾರ್ಥಿಗಳಿಗೆ ನಗರದ ಈದ್ಗಾ ಮೈದಾನದ ಬಳಿ ಬೀಳ್ಕೊಡಲಾಯಿತು.

ಅಂಜುಮನ್‌ ಸಮಿತಿಯ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿ, ‘ಮುಸ್ಲಿಮರ ಪವಿತ್ರ ಕ್ಷೇತ್ರಗಳಾದ ಮೆಕ್ಕಾ ಮತ್ತು ಮದೀನಾದಲ್ಲಿ ಪ್ರಾರ್ಥನೆ ಸಲ್ಲಿಸುವಾಗ, ಭಾರತದಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿಯಾಗಲೆಂದು ಕೋರಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಬಿ. ಮೊಹಮ್ಮದ್‌ ರಿಯಾಜ್‌,ಅಫ್ಸರ್, ಅನ್ಸರ್, ಚಾಂದ್, ವಲಿ, ಫಾರೂಕ್ ಬಾಷಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.