ADVERTISEMENT

ಲಂಚ ಪಡೆಯುವಾಗ ಬಿಲ್ ಕಲೆಕ್ಟರ್ ಎ.ಸಿ.ಬಿ. ಬಲೆಗೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 15:36 IST
Last Updated 9 ಜುಲೈ 2019, 15:36 IST

ಹೊಸಪೇಟೆ: ಲಂಚ ಪಡೆಯುವಾಗ ನಗರಸಭೆ ಬಿಲ್ ಕಲೆಕ್ಟರ್ ಮಾರೆಣ್ಣ ಎಂಬುವರು ಮಂಗಳವಾರ ಎ.ಸಿ.ಬಿ. ಬಲೆಗೆ ಬಿದ್ದಿದ್ದಾರೆ.

ನಗರದ ಪಾಂಡುರಂಗಯ್ಯ ಎಂಬುವರು ಫಾರಂ ನಂಬರ್ ಮೂರು ಪಡೆಯಲು ನಗರಸಭೆಗೆ ಹೋಗಿದ್ದರು. ಈ ವೇಳೆ ಬಿಲ್ ಕಲೆಕ್ಟರ್ ನಾಲ್ಕು ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ಸಾವಿರ ನಗದು ಪಡೆದಿದ್ದಾರೆ. ಸಂಜೆ ಮಿಕ್ಕುಳಿದ ಮೂರು ಸಾವಿರ ರೂಪಾಯಿ ಕೊಡುವಾಗ ಎ.ಸಿ.ಬಿ. ಸಿಪಿಐ‌ ಶ್ರೀಧರ್ ದೊಡ್ಡಿ ನೇತೃತ್ವದ ತಂಡ ದಾಳಿ ನಡೆಸಿ, ಹಣದ ಸಮೇತ ಮಾರೆಣ್ಣ ಅವರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT