ADVERTISEMENT

‘ಎಚ್ಚರ ವಹಿಸಿದರೆ ಪ್ರಾಣಕ್ಕಿಲ್ಲ ಕುತ್ತು‘

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 12:26 IST
Last Updated 19 ಜೂನ್ 2019, 12:26 IST
ಕಾರ್ಯಕ್ರಮದಲ್ಲಿ ಜೆಸ್ಕಾಂ ಲೆಕ್ಕಪತ್ರ ಅಧಿಕಾರಿ ಡಿ.ಟಿ. ಹಳ್ಳಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಜೆಸ್ಕಾಂ ಲೆಕ್ಕಪತ್ರ ಅಧಿಕಾರಿ ಡಿ.ಟಿ. ಹಳ್ಳಿ ಮಾತನಾಡಿದರು   

ಹೊಸಪೇಟೆ: ’ಪವರ್‌ಮ್ಯಾನ್‌ಗಳು ಎಚ್ಚರ ಹಾಗೂ ಸೂಕ್ಷ್ಮ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಪ್ರಾಣಕ್ಕೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ‘ ಎಂದು ಜೆಸ್ಕಾಂ ಉಪ ನಿಯಂತ್ರಣಾಧಿಕಾರಿ ಹೊನ್ನೂರಪ್ಪ ಹೇಳಿದರು.

ಜೆಸ್ಕಾಂ ಹಾಗೂ ನೌಕರರ ಸಂಘದ ಸಹಭಾಗಿತ್ವದಲ್ಲಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

’ಪವರ್‌ಮ್ಯಾನ್‌ಗಳು ಕಂಬ ಹತ್ತುವುದಕ್ಕಿಂತ ಮುಂಚೆ ಎಲ್ಲ ರೀತಿಯಿಂದಲೂ ಪರಿಶೀಲನೆ ನಡೆಸಿಯೇ ಹತ್ತಬೇಕು. ಟ್ರಾನ್ಸಫಾರ್ಮರ್‌ನಿಂದ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಿದ ನಂತರವೇ ದುರಸ್ತಿ ಕೆಲಸ ಮಾಡಬೇಕು. ಅದರಲ್ಲೂ ಮಳೆಗಾಲದಲ್ಲಿ ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮುಂಜಾಗರೂಕತೆ ವಹಿಸಿದರೆ ದೊಡ್ಡ ಅವಘಡ ತಪ್ಪಿಸಬಹುದು‘ ಎಂದು ತಿಳಿಸಿದರು.

ADVERTISEMENT

ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಮೇಟಿ ಹನುಮಂತಪ್ಪ, ಲೆಕ್ಕಪತ್ರ ಅಧಿಕಾರಿ ಡಿ.ಟಿ. ಹಳ್ಳಿ, ಹಗರಿಬೊಮ್ಮನಹಳ್ಳಿ ಜೆಸ್ಕಾಂ ಘಟಕದ ಕಾರ್ಯನಿರ್ವಾಹಕ ಎಂಜಿನಿಯರ್‌ ತೇಜ ನಾಯ್ಕ, ಕಲಬುರ್ಗಿ ವಿಭಾಗ ಮಟ್ಟದ ನೌಕರರ ಸಂಘದ ಉಪಾಧ್ಯಕ್ಷ ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.