ADVERTISEMENT

‘ಅಹಿಂದ ವರ್ಗ ಮುಖ್ಯ ವಾಹಿನಿಗೆ ಬರಲಿ’

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 13:24 IST
Last Updated 17 ಜನವರಿ 2021, 13:24 IST
ಅಹಿಂದ ಯುವ ವೇದಿಕೆ ನಗರ ಘಟಕದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೈ. ಲಕ್ಷ್ಮೀಪತಿ ಅವರಿಗೆ ಭಾನುವಾರ ಹೊಸಪೇಟೆಯಲ್ಲಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಳಿ ಆಯ್ಕೆ ಪತ್ರ ನೀಡಿದರು
ಅಹಿಂದ ಯುವ ವೇದಿಕೆ ನಗರ ಘಟಕದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೈ. ಲಕ್ಷ್ಮೀಪತಿ ಅವರಿಗೆ ಭಾನುವಾರ ಹೊಸಪೇಟೆಯಲ್ಲಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಳಿ ಆಯ್ಕೆ ಪತ್ರ ನೀಡಿದರು   

ಹೊಸಪೇಟೆ: ‘ಅಹಿಂದ ವರ್ಗಗಳು ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿದ್ದಾರೆ. ಆದರೆ, ರಾಜಕೀಯ, ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ. ಈ ವರ್ಗಗಳಿಗೆ ಎಲ್ಲ ರೀತಿಯ ಸವಲತ್ತು ಸಿಕ್ಕು ಮುಖ್ಯ ವಾಹಿನಿಗೆ ಬರಬೇಕು’ ಅಹಿಂದ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಳಿ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ವೇದಿಕೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ರಾಜಕೀಯ ಅಧಿಕಾರ ಇಲ್ಲದೆ ಏನೂ ಮಾಡಲು ಆಗುವುದಿಲ್ಲ. ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಮುಂಬರುವ ನಗರಸಭೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅಹಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲಬೇಕು’ ಎಂದು ತಿಳಿಸಿದರು.

ADVERTISEMENT

ನಗರಸಭೆಯ ಮಾಜಿ ಸದಸ್ಯ ಕೆ.ಗೌಸ್ ಮಾತನಾಡಿ, ‘ಅಹಿಂದ ಯುವವೇದಿಕೆಯು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅಹಿಂದ ವರ್ಗದಿಂದ ಯುವಕರು ರಾಜಕೀಯಕ್ಕೆ ಬಂದರೆ ಅದರಿಂದ ಉಪಯೋಗವಾಗುವುದು’ ಎಂದರು.

ಇದೇ ವೇಳೆ ಅಹಿಂದ ಯುವ ವೇದಿಕೆ ನಗರದ ಘಟಕದ ಹೊಸ ಅಧ್ಯಕ್ಷರಾಗಿ ವೈ. ಲಕ್ಷ್ಮೀಪತಿ ಅವರನ್ನು ಆಯ್ಕೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ರಾಮಲಿ ಕಾಕುಬಾಳು, ಕೇಶವ, ಗೆಲುವಪ್ಪ, ದೇವರಾಜ್ ಚೌಕಿ, ಖಾದರ್ ಬಾಷ, ನಾಗರಾಜ್ ಬಿ. ಹುಲುಗಪ್ಪ, ಮೇಟಿ ಹನುಮಂತಪ್ಪ, ಇಂಗಳಗಿ ದ್ಯಾಮಣ್ಣ, ಉದಯ, ನೂರ್‌ ಬಾಷ, ಮಾ ಬಾಷ, ಸಿ.ಕೊಟ್ರೇಶ್, ಯುವರಾಜ್, ಪಂಪಣ್ಣ, ಕೆ.ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.