ಕುರುಗೋಡು: ‘ಅಂಬೇಡ್ಕರ್ ಅವರನ್ನು ಒಂದು ಜಾತಿಗೆ, ಒಂದು ಕೇರಿಗೆ ಸೀಮಿತಗೊಳಿಸಬಾರದು’ ಎಂದು ವೆಂಕಟಾಪುರದ ಬಸವರಾಜ ಶರಣರು ಹೇಳಿದರು.
ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಶನಿವಾರ ನಡೆದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂ ಜಯಂತಿ ಉದ್ಘಾಟಿಸಿ ಮಾತನಾಡಿದರು.
‘ಅಂಬೇಡ್ಕರ್ ಚಿತ್ರಕ್ಕೆ ಪೂಜೆ ಸಲ್ಲಿಸಿದರೆ ಸಾಲದು ಅವರು ಸೂಚಿಸಿದ ಮಾರ್ಗದಲ್ಲಿ ಸಾಗಿ ಅವರಿಗೆ ಗೌರವ ಸಲ್ಲಿಸಬೇಕು’ ಎಂದರು.
ಚರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ, ‘ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಹಾದಿಯಲ್ಲಿ ನಾವು ಸಾಗಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಎಲ್ಲರೂ ಅವರ ತತ್ವ ಮತ್ತು ಆರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಬಿ.ಎಂ ಸತೀಶ್ ಬಸವಭೂಷಣಶ್ರೀ ಧರಪ್ಪ ನಾಯಕ ಮಾತನಾಡಿದರು. ಅಪ್ಪು ಕಲಾ ಟ್ರಸ್ಟ್, ಜೈ ಭೀಮ್ ಸ್ನೇಹ ಜೀವಿ ಬಳ್ಳಾರಿ ಈರೇಶ್ ತಂಡದಿಂದ ನೃತ್ಯ ರೂಪಕ ಪ್ರದರ್ಶನವಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮಿ ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಹುಲುಗಪ್ಪ, ಟಿ.ಶೇಖಣ್ಣ, ಕೊಡ್ಲೆ ಮಲ್ಲಿಕಾರ್ಜುನ, ಬಿ.ಉಮೇಶ್, ವಿ.ಶೇಖರ್, ರಾರಾವಿ ವೆಂಕಟೇಶ್, ಡೀಸೆಲ್ ಶಶಿ, ಅನ್ವರ್ ಬಾಷ, ವಿ.ಹನುಮೇಶ್, ಆಲಂ ಬಾಷ ಮತ್ತು ಹಳ್ಳಿ ಮರದ ನಾಗರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.