ಕಂಪ್ಲಿ: ತಾಲ್ಲೂಕಿನ ಜವುಕು ಗ್ರಾಮದ ಆರಾಧ್ಯದೈವ ಆಂಜನೇಯಸ್ವಾಮಿ ಮಹಾರಥೋತ್ಸವ ಸೋಮವಾರ ಸಂಜೆ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಪ್ರಯುಕ್ತ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಅಗ್ನಿಕುಂಡೋತ್ಸವದಲ್ಲಿ ಅಗ್ನಿ ತುಳಿದ ಪೂಜಾರಿ ಸಣ್ಣ ಬಸವರಾಜ ನುಡಿದ ಭವಿಷ್ಯವಾಣಿಯನ್ನು ನೆರೆದಿದ್ದ ಭಕ್ತರು ಕಾತರದಿಂದ ಆಲಿಸಿದರು.
‘ಈ ಬಾರಿ ಮಳೆ, ಬೆಳೆ ಉತ್ತಮವಾಗಿರುತ್ತದೆ. ರೋಗರುಜಿನ ಇಲ್ಲದೇ ಜನ ಸುಖವಾಗಿರುತ್ತಾರೆ’ ಎಂದು ಭವಿಷ್ಯ ನುಡಿದು, ‘ಮುಂದಿನ ಐದು ಅಮಾವಾಸ್ಯೆ ಗ್ರಾಮ ದೇವತೆ ಸುಂಕ್ಲಮ್ಮ, ಮಾರೆಮ್ಮದೇವಿಗೆ ಗ್ರಾಮಸ್ಥರು ಎಡೆ ಕೊಡಬೇಕು’ ಎಂದು ಸೂಚಿಸಿದರು.
ರಥೋತ್ಸವದಲ್ಲಿ ಶಾಸಕ ಜೆ.ಎನ್. ಗಣೇಶ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.