ADVERTISEMENT

ಅರಸೀಕೆರೆ: ಉತ್ತಮ ಮಳೆ; ನೆಲಕಚ್ಚಿದ ಭತ್ತದ ಬೆಳೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:07 IST
Last Updated 9 ನವೆಂಬರ್ 2023, 16:07 IST
ಅರಸೀಕೆರೆ ಗಡಿಭಾಗದ ವಡ್ಡಿನಹಳ್ಳಿ ಗ್ರಾಮದಲ್ಲಿ ಸುರಿದ ಮಳೆಗೆ ಕಾಟಾವು ಹಂತದಲ್ಲಿದ್ದ ಭತ್ತ ಚಾಪೆ ಹಾಸಾಗಿರುವ ಬೆಳೆ ವೀಕ್ಷಿಸುತ್ತಿರುವ ರೈತ ದ್ಯಾಮಪ್ಪ.
ಅರಸೀಕೆರೆ ಗಡಿಭಾಗದ ವಡ್ಡಿನಹಳ್ಳಿ ಗ್ರಾಮದಲ್ಲಿ ಸುರಿದ ಮಳೆಗೆ ಕಾಟಾವು ಹಂತದಲ್ಲಿದ್ದ ಭತ್ತ ಚಾಪೆ ಹಾಸಾಗಿರುವ ಬೆಳೆ ವೀಕ್ಷಿಸುತ್ತಿರುವ ರೈತ ದ್ಯಾಮಪ್ಪ.   

ಅರಸೀಕೆರೆ: ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಉತ್ತಮ ಮಳೆ ಸುರಿದಿದ್ದು, ಗುರುವಾರವೂ ಮುಂದುವರಿದಿದೆ.

ಬುಧವಾರ ಸುರಿದ ಮಳೆಗೆ ಕಂಚಿಕೆರೆ ಗ್ರಾಮದಲ್ಲಿ ಗುತ್ಯಪ್ಲ ಮಲ್ಲಮ್ಮ ಹಾಗೂ ಮೈಲಮ್ಮ ಎಂಬುವವರ ಮನೆಗಳು ಭಾಗಶಃ ಹಾನಿಯಾಗಿದೆ.

ಗಡಿ ಭಾಗದ ಹಿರೇಮೆಗಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡಿನಹಳ್ಳಿ, ಚಿಕ್ಕಮೇಗಳಗೆರೆ, ಹಿರೇಮೆಗಳಗೆರೆ, ಬಸಾಪುರ ಗ್ರಾಮಗಳ ಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಕಟಾವು ಹಂತದಲ್ಲಿರುವ ಭತ್ತದ ಬೆಳೆ ಅಲ್ಲಲ್ಲಿ ಚಾಪೆ ಹಾಸಿದೆ.

ADVERTISEMENT

‘ಕಟಾವು ಹಂತದಲ್ಲಿರುವ ಭತ್ತದ ಬೆಳೆ ನೆಲ ಹಾಸಾಗಿದೆ. ಭತ್ತ ಉದುರಿ ನಷ್ಟ ಉಂಟಾಗಲಿದೆ’ ಎಂದು ರೈತ ವಡ್ಡಿನಹಳ್ಳಿ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

ಮಳೆ ವಿವರ: ಅರಸೀಕೆರೆ: 48.2 ಮಿ.ಮೀ, ಹಿರೇಮೆಗಳಗೆರೆ:-28.2 ಮಿ.ಮೀ, ಉಚ್ಚಂಗಿದುರ್ಗ:-29.4ಮಿ.ಮೀ ಮಳೆಯಾಗಿದೆ.

ಅರಸೀಕೆರೆ ಹೋಬಳಿಯ ಹಿರೇಮೆಗಳಗೆರೆ ಗ್ರಾಮದ ಬಳಿ ಮಳೆಗೆ ಒದ್ದೆಯಾಗಿರುವ ಮೆಕ್ಕೆಜೋಳವನ್ನು ಒಣಗಿಸಲು ರಸ್ತೆಗೆ ಹಾಕಿರುವ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.