
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಆಗಿ ಕಾಂಗ್ರೆಸ್‌ನ ಪಿ. ಗಾದೆಪ್ಪ ಮತ್ತು ಉಪ ಮೇಯರ್ ಆಗಿ ಮುಬೀನಾ ಬೀ ಶನಿವಾರ ಆಯ್ಕೆಯಾದರು.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ಗಾದೆಪ್ಪ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನ ಪ್ರಭಂಜನ ಕುಮಾರ್ ಮತ್ತು ಆಸೀಫ್ ಎಂಬುವರು ಕೂಡ ನಾಮಪತ್ರ ಸಲ್ಲಿಸಿದರು. ಆದರೆ, ಅವರಿಬ್ಬರಿಗೂ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಲಾಯಿತು. ಬಿಜೆಪಿಯಿಂದ ತಿಲಕ್ ಕುಮಾರ್ ಸ್ಪರ್ಧಿಸಿದರು. ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಮುಬೀನಾ ಮತ್ತು ಬಿಜೆಪಿಯ ಕಲ್ಪನಾ ಸರ್ಧಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್‌ನ ಗಾದೆಪ್ಪ ಮತ್ತು ಮುಬೀನಾ ತಲಾ 28 ಮತ ಪಡೆದು, ವಿಜೇತರಾದರು. ಬಿಜೆಪಿಯ ತಿಲಕ್ ಮತ್ತು ಕಲ್ಪನಾ ತಲಾ 13 ಮತ ಪಡೆದು ಪರಾಭವಗೊಂಡರು. ಪಾಲಿಕೆಯ ನಾಲ್ಕು ಪೈಕಿ ಮೂರು ಸ್ಥಾಯಿ ಸಮಿತಿ ಕಾಂಗ್ರೆಸ್ ಪಾಲಾಯಿತು. ಲೆಕ್ಕಪತ್ರ ಸಮಿತಿಯ ಬಿಜೆಪಿ ಪಾಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.