ಸಿರುಗುಪ್ಪ: ಧರ್ಮಸ್ಥಳ ಸಂಘದಿಂದ ಮಾಡಿದ ವಿಮೆಯಿಂದಾಗಿ ಆಪತ್ಕಾಲದಲ್ಲಿ ಸದಸ್ಯರ ಕುಟುಂಬಕ್ಕೆ ನೆರವಾಗಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.
ನಗರದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸೋಮವಾರ ನಡೆದ ಜಾಫರ್ ಸಾಧಿಕ್ ಸಂಘದ ಪಾಲುದಾರ ಸದಸ್ಯರಾದ ಶಂಶಾದ್ ಬೇಗಂ ಫಲಾನುಭವಿಗೆ ಪ್ರಗತಿ ರಕ್ಷಾ ಕಾರ್ಯಕ್ರಮದಡಿ ₹3 ಲಕ್ಷ ಹಾಗೂ ವಿಮಾ ಕಂಪನಿಯಂದ ₹2 ಲಕ್ಷ ಒಟ್ಟು ₹5 ಲಕ್ಷ ಮೊತ್ತದ ವಿಮಾ ಮಂಜೂರಾತಿ ಪ್ರತಿಯನ್ನು ನೀಡಿ ಮಾತನಾಡಿದರು.
ತಾಲ್ಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರ ಕಿರಣ್ ಜೈನ್, ನಗರಸಭೆ ಸದಸ್ಯ ಮಿರ ಹುಸೇನ್ , ಕೃಷಿ ಮೇಲ್ವಿಚಾರಕ ವೀರೇಶ, ವಲಯದ ಮೇಲ್ವಿಚಾರಕ ಚಂದ್ರಕಲಾ, ಸೇವಾಪ್ರತಿನಿಧಿ ಶಾಕೀರಾ, ಶಾಹೀದಾ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.