ADVERTISEMENT

ಕೂಡ್ಲಿಗಿ | ಕರಡಿ ದಾಳಿ; ರೈತನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 3:44 IST
Last Updated 27 ಆಗಸ್ಟ್ 2025, 3:44 IST
<div class="paragraphs"><p>ಕರಡಿ</p></div>

ಕರಡಿ

   

ಕೂಡ್ಲಿಗಿ: ತೋಟದಲ್ಲಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ಗೆದ್ದಲಗಟ್ಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗೆದ್ದಲಗಟ್ಟೆಯ ಚಂದ್ರಪ್ಪ ಗಾಯಗೊಂಡ ರೈತರು. ಅವರು ಎಂದಿನಂತೆ ದನಗಳನ್ನು ಹೊಡೆದುಕೊಂಡು ತಮ್ಮ ಅಡಿಕೆ ತೋಟಕ್ಕೆ ಹೋಗಿದ್ದಾಗ, ಮಧ್ಯಾಹ್ನ ಕರಡಿಯೊಂದು ಏಕಾಏಕಿ ದಾಳಿ ಮಾಡಿ ಪರಚಿದೆ. ಇದರಿಂದ ಚಂದ್ರಪ್ಪ ಅವರ ಎಡಗೈಗೆ ಗಾಯವಾಗಿದೆ. ಕರಡಿ ದಾಳಿ ಮಾಡುತ್ತಿದ್ದಂತೆ ಚಂದ್ರಪ್ಪ ಹಾಗೂ ಅವರ ಜೊತೆಯದ್ದವರೊಬ್ಬರು ಜೋರಾಗಿ ಕೂಗಿಕೊಂಡಾಗ ಎರಡು ಕರಡಿಗಳು ಓಡಿ ಹೋಗಿವೆ.

ADVERTISEMENT

ಚಂದ್ರಪ್ಪನನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಗಾಯಾಳು ರೈತನ ಯೋಗಕ್ಷೇಮ ವಿಚಾರ ಮಾಡಿದ್ದು, ಸೂಕ್ತ ಪರಿಹಾರ ಕೊಡಿಸುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.