ADVERTISEMENT

ಹಲಕುಂದಿ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 14:16 IST
Last Updated 8 ಆಗಸ್ಟ್ 2022, 14:16 IST
ಕರಡಿ
ಕರಡಿ    

ಬಳ್ಳಾರಿ: ಇಲ್ಲಿಗೆ ಸಮೀಪದ ಹಲಕುಂದಿ ಗ್ರಾಮದಲ್ಲಿ ಭಾನುವಾರ ರಾತ್ರಿ ಕರಡಿ ಓಡಾಡುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನರು ಅತಂಕಕ್ಕೆ ಒಳಗಾಗಿದ್ದಾರೆ.

ತಡರಾತ್ರಿ ಗ್ರಾಮದ ಚರ್ಚ್ ಬಳಿ ಕರಡಿ ಓಡಾಡಿದೆ. ಕರಡಿಯನ್ನು ನೋಡಿದ ನಾಯಿಗಳು ಸಿಕ್ಕಾಪಟ್ಟೆ ಗಲಾಟೆ ಮಾಡಿದ್ದು, ನಾಯಿಗಳ ಕೂಗಾಟಕ್ಕೆ ಜನರೂ ಎದ್ದು ಕರಡಿಯನ್ನು ಓಡಿಸಿದ್ದಾರೆ.

ಕರಡಿ ಗ್ರಾಮಕ್ಕೆ ಬರುವುದು ಇದು ಹೊಸದೇನಲ್ಲ ಕಳೆದ ಮೂರು ವರ್ಷಗಳಿಂದ ಕರಡಿ ಕಾಟ ಇದೆ. ಜನ ಎಚ್ಚರಿಕೆಯಿಂದ ತಿರುಗಾಡುತ್ತಿದ್ದಾರೆ. ಏನಾದರೂ ಅನಾಹುತವಾಗುವ ಮುನ್ನವೇ ಅರಣ್ಯ ಇಲಾಖೆ ಕರಡಿ ಬರದಂತೆ ತಡೆಯಬೇಕಿದೆ ಎಂಬುದು ಗ್ರಾಮಸ್ಥರ ಒತ್ತಾಯ.

ADVERTISEMENT

ಕರಡಿ ಕಳೆದ ವರ್ಷ ಇದೇ ಸಮಯದಲ್ಲಿ ಗ್ರಾಮಕ್ಕೆ ಬಂದಿತ್ತು. ಕರಡಿ ಹಾವಳಿ ತಪ್ಪಿಸುವಂತೆ ಮನವಿ ಮಾಡಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೆ. ಇಂದೂ ಪುನಃ ಡಿಎಫ್‌ಒ ಕಚೇರಿಗೆ ಪತ್ರ ಬರೆದಿದ್ದೇನೆ ಎಂದು ಹಲಕುಂದಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್‌.ಆರ್‌. ಮಲ್ಲಿಕಾರ್ಜುನ ಗೌಡ ತಿಳಿಸಿದರು.

ಹಲಕುಂದಿಯ ಹೊರವಲಯದ ೧.೫ ಕಿ.ಮೀ ದೂರದಲ್ಲಿ ನಿರ್ಬಂಧಿತ ಅರಣ್ಯ ಪ್ರದೇಶವಿದೆ. ಕುಡಿಯುವ ನೀರು ಹುಡುಕಿಕೊಂಡು ಕರಡಿ ಬಂದಿರಬಹುದು. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.