ಸ್ಲೀಪರ್ ಬಸ್ (ಸಾಂದರ್ಭಿಕ ಚಿತ್ರ)
ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದ ಒಂದನೇ ಘಟಕದಿಂದ ಬಳ್ಳಾರಿ-ಸೊಲ್ಲಾಪುರ(ಮಹಾರಾಷ್ಟ್ರ)ಕ್ಕೆ ನೂತನ ನಾನ್ ಎ.ಸಿ ಸ್ಲೀಪರ್‌ನ ಅಂತರರಾಜ್ಯ ಸಾರಿಗೆ ಕಾರ್ಯಾಚರಣೆ ಬಸ್ ಶುಕ್ರವಾರದಿಂದ ಪ್ರಾರಂಭಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಅವರು ತಿಳಿಸಿದ್ದಾರೆ.
ಬಳ್ಳಾರಿಯಿಂದ ರಾತ್ರಿ 9.30ಕ್ಕೆ ಹೊರಟು ವಯಾ ಹೊಸಪೇಟೆ, ವಿಜಯಪುರ ಮಾರ್ಗವಾಗಿ ಬೆಳಿಗ್ಗೆ 5.30ಕ್ಕೆ ಸೊಲ್ಲಾಪುರ ತಲುಪಲಿದೆ. ಸೊಲ್ಲಾಪುರದಿಂದ ರಾತ್ರಿ 8.45 ಕ್ಕೆ ಹೊರಟು ಬೆಳಿಗ್ಗೆ 4.45ಕ್ಕೆ ಬಳ್ಳಾರಿಗೆ ತಲುಪಲಿದೆ.
ಆಸನಗಳ ಮುಂಗಡ ಕಾಯ್ದಿರಿಸುವಿಕೆಗಾಗಿ www.ksrtc.inಗೆ ಭೇಟಿ ನೀಡಬಹುದು. ಈ ಸಾರಿಗೆ ವ್ಯವಸ್ಥೆಯನ್ನು ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.