ಕುರುಗೋಡು: ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ವೇಳೆ ಜಾತಿ ಪಟ್ಟಿಯಲ್ಲಿರುವಂತೆ ಉಪಜಾತಿ ಕಲಂನಲ್ಲಿನ ಕ್ರ,ಸಂ 23ರ ಭೋವಿ ವಡ್ಡರು ಎಂದು ನಮೂದಿಸಬೇಕು ಎಂದು ತಾಲ್ಲೂಕಿನ ಸೋಮಸಮುದ್ರ ಗ್ರಾಮದ ಭೋವಿಸಮಾಜದ ಮುಖಂಡ ವಿ.ರಾಘವೇಂದ್ರ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೇ 5ರಿಂದ ಸಮೀಕ್ಷೆ ಪ್ರಾರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾತಿ ಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಹಾಗೂ ಸರ್ಕಾರದ ಸೌಲಭ್ಯಗಳು ದೊರಕಲಿವೆ.
ಸರ್ಕಾರದ ಮಾಹಿತಿ ಪ್ರಕಾರ ಭೋವಿ (ವಡ್ಡರ) ಸಮುದಾಯವು ಪರಿಶಿಷ್ಟಜಾತಿಯಲ್ಲಿ ಶೇ 11ರಷ್ಟಿದೆ ಎಂದು ಹೇಳಲಾಗಿದೆ.
ಪರಿಶಿಷ್ಟಜಾತಿ ಗಣತಿಯಲ್ಲಿ ವಡ್ಡರ ಸಮಾಜದವರು ಸಕ್ರೀಯವಾಗಿ ಭಾಗವಹಿಸಬೇಕು. ಸಮೀಕ್ಷೆಗೆ ಮನೆಗೆ ಬರುವ ಸಿಬ್ಬಂದಿಗೆ ಸರಿಯಾದ ಮಾಹಿತಿ ನೀಡಬೇಕು. ಜಾತಿ ಪ್ರಮಾಣಪತ್ರ ನೀಡಿ ಜಾತಿ/ಉಪಜಾತಿ ದೃಢೀಕರಿಸಬೇಕು ಎಂದು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.