ADVERTISEMENT

ಬಿಜೆಪಿಯಿಂದ ಸ್ವಚ್ಛತೆ ಶ್ರಮದಾನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 14:27 IST
Last Updated 14 ಏಪ್ರಿಲ್ 2025, 14:27 IST
ಹರಪನಹಳ್ಳಿ ಬಸ್ ನಿಲ್ದಾಣದಲ್ಲಿ ಬಿಜೆಪಿ ಮುಖಂಡರು ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಶ್ರಮದಾನ ಮಾಡಿದರು
ಹರಪನಹಳ್ಳಿ ಬಸ್ ನಿಲ್ದಾಣದಲ್ಲಿ ಬಿಜೆಪಿ ಮುಖಂಡರು ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಶ್ರಮದಾನ ಮಾಡಿದರು   

ಹರಪನಹಳ್ಳಿ : ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಬಿಜೆಪಿ ಮಂಡಲದಿಂದ ಸ್ವಚ್ಛತಾ ಆಂದೋಲನ ಸೋಮವಾರ ನಡೆಯಿತು.

ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್‌ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು, ಬಾಪೂಜಿ ನಗರದಲ್ಲಿರುವ ಸಂವಿಧಾನ ಶಿಲ್ಪಿ ಫಲಕಕ್ಕೆ‌ ಪುಷ್ಪಾರ್ಚನೆ ನೆರವೇರಿಸಿ ಬಳಿಕ ಸಾರಿಗೆ ಬಸ್ ನಿಲ್ದಾಣದಲ್ಲಿ ಶ್ರಮದಾನ ಮಾಡಿದರು.

ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ, ಮುಖಂಡರಾದ ಬಾಗಳಿ‌ ಕೊಟ್ರೇಶಪ್ಪ, ಆರುಂಡಿ ನಾಗರಾಜ್, ಎಸ್.ಪಿ.ಲಿಂಬ್ಯಾನಾಯ್ಕ, ಕಣವಿಹಳ್ಳಿ ಮಂಜುನಾಥ ಮಾತನಾಡಿದರು.

ADVERTISEMENT

ಕೆ.ಲಿಂಗಾನಂದ, ಎಲ್.ಮಂಜನಾಯ್ಕ, ಚನ್ನನಗೌಡ, ಕಡತಿ‌ ರಮೇಶ್, ಗಂಗಾಧರ, ಉದಯಕುಮಾರ್, ವೆಂಕಟೇಶ ನಾಯ್ಕ, ಮರಿಯಪ್ಪ, ಮೈದೂರು ಮಲ್ಲಿಕಾರ್ಜುನ, ಓಂಕಾರಗೌಡ, ಕಡೇಮನಿ ಸಂಗಮೇಶ. ಗಿರೀಶ್ ಸಪ್ನ, ಜಾನಕಮ್ಮ, ಪದ್ಮಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.