
ಕಂಪ್ಲಿ: ತುಂಗಭದ್ರಾ ಪಾವಿತ್ರ್ಯತೆ ಕಾಪಾಡಲು ಅಭಿಯಾನ ಹಮ್ಮಿಕೊಂಡಿರುವುದಾಗಿ ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಧಾನ ಸಂಚಾಲಕ ಮಹಿಮಾ ಪಾಟೀಲ್ ತಿಳಿಸಿದರು.
ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಗುರುವಾರ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ 3ನೇ ಹಂತದ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಈ ಹೋರಾಟದಲ್ಲಿ ಪರಿಸರ ಪ್ರಿಯರು, ಶಿಕ್ಷಕರು, ವೈಚಾರಿಕ ಪ್ರಜ್ಞೆಯುಳ್ಳವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸಂಚಾಲಕ ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, 3ನೇ ಹಂತದ ಪಾದಯಾತ್ರೆ ಡಿ.27ರಂದು ಕಂಪ್ಲಿಗೆ ಆಗಮಿಸಲಿದ್ದು ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಚಾಲಕರಾದ ಮಾಧವನ್, ಪರಣ್ಣ ಮನವಳ್ಳಿ, ಡಾ. ರಾಮಾಂಜಿನೇಯ, ಡಾ. ಜಂಬುನಾಥಗೌಡ, ಎಸ್.ಎಂ. ನಾಗರಾಜ, ವೈ. ಮಾಧವರೆಡ್ಡಿ, ಎ.ಸಿ. ದಾನಪ್ಪ, ಅಗಳಿ ಪಂಪಾಪತಿ, ಪಿ. ಬ್ರಹ್ಮಯ್ಯ, ಎಂ. ಸುಧೀರ್, ವಿ.ಎಲ್. ಬಾಬು, ವಿ. ವಿದ್ಯಾಧರ, ಡಿ. ಮೌನೇಶ, ಬಿ.ಎಂ. ರುದ್ರಯ್ಯ, ಉಗಾದಿ ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಅಯೋದಿ ಹರೀಶ್, ಮುಕ್ಕುಂದಿ ಮಮತಾ, ಕಲ್ಗುಡಿ ನಾಗರತ್ನ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.