ADVERTISEMENT

ಕೂಡ್ಲಿಗಿ: ಗಾಂಜಾ ಪ್ರಕರಣ: ಆರೋಪಿ ಬಂಧನ

ಮನೆ ಮೇಲೆ ಗಾಂಜಾ ಎಸೆದು ಪೊಲೀಸರಿಗೆ ತಿಳಿಸಿದ್ದ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 5:00 IST
Last Updated 14 ಮಾರ್ಚ್ 2021, 5:00 IST
ಕೆ.ಚನ್ನಬಸಪ್ಪ
ಕೆ.ಚನ್ನಬಸಪ್ಪ   

ಕೂಡ್ಲಿಗಿ: ತಾಲ್ಲೂಕಿನ ಬಡೇಲಡಕು ಗ್ರಾಮದ ಬಸವರಾಜ ಅವರ ಮನೆ ಮೇಲೆ ಸಿಕ್ಕ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೂಡ್ಲಿಗಿ ಪೊಲೀಸರು ಬಂಧಿಸಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಲಗಾಪುರ ಗ್ರಾಮದ ಕೆ. ಚನ್ನಬಸಪ್ಪ ಬಂಧಿತ ಆರೋಪಿ.

ಬಡೇಲಡಕು ಗ್ರಾಮದಬಸವರಾಜ ಎಂಬುವವರ ಮೆನೆ ಮೇಲೆ ಗಾಂಜಾ ಇದೆ ಎಂಬ ಮಾಹಿತಿ ಮೇರೆಗೆ ಕೂಡ್ಲಿಗಿ ಪೊಲೀಸರು ಜನವರಿ28ರಂದು ಕಾರ್ಯಾಚರಣೆ ನಡೆಸಿ ಗಾಂಜಾ ವಶಪಡಿಸಿಕೊಂಡು, ಅತನನ್ನು ಠಾಣೆಗೆ ಕರೆ ತಂದು ವಿಚಾರಣೆ ಮಾಡಿದ್ದರು. ಆದರೆ ಇದರಲ್ಲಿ ಬಸವರಾಜ ಅವರ ಪಾತ್ರ ಏನಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮಾಹಿತಿ ನೀಡಿದವರನ್ನು ಬಂಧಿಸಿ ವಿಚಾರಣೆ ಮಾಡುವಂತೆ ಒತ್ತಾಯಿಸಿದ್ದರು.

ಇದರಿಂದ ಪೋನ್ ಕರೆ ಮಾಡಿದ ವ್ಯಕ್ತಿ ಹುಡುಕಾಟದಲ್ಲಿ ತೊಡಗಿದ್ದ ಕೂಡ್ಲಿಗಿ ಪೊಲೀಸರು ಡಿವೈಎಸ್ಪಿ ಜಿ. ಹರೀಶ್ ಹಾಗೂ ಸಿಪಿಐ ವಸಂತ ಅಸೋದೆ ಮಾರ್ಗದರ್ಶನದಲ್ಲಿ ಕೆ.ಚನ್ನಬಸಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ದ್ವೇಷದಿಂದ ಗಾಂಜಾ ಇಟ್ಟಿದ್ದ: ಬಡೇಲಡಕು ಗ್ರಾಮದ ಯುವತಿಯನ್ನು ಕೆ. ಚನ್ನಬಸಪ್ಪ ಪ್ರೀತಿ ಮಾಡುತ್ತಿದ್ದ. ಇಬ್ಬರು ಜತೆಯಲ್ಲಿ ಇದ್ದುದನ್ನು ಬಸವರಾಜ ನೋಡಿದ್ದ. ಆ ನಂತರ ವಿಷಯ ಹುಡುಗಿ ಮನೆಯವರಿಗೆ ಗೊತ್ತಾಗಿತ್ತು. ಬಸವರಾಜ ಹುಡುಗಿ ಮನೆಯವರಿಗೆ ವಿಷಯ ತಿಳಿಸಿದ್ದಾನೆ ಅಂದುಕೊಂಡ ಆರೋಪಿ, ಆತನ ಮನೆಯ ಮೇಲೆ ಗಾಂಜಾ ಎಸೆದು ಮಾಹಿತಿ ನೀಡಿದ್ದ ಎಂದು ಪಿಎಸ್‍ಐ ಸುರೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.