ಹೂವಿನಹಡಗಲಿ: ಇಲ್ಲಿನ ಹಿರೇಮಲ್ಲನಕೆರೆ ಮಠದ ಲಿಂ. ಚನ್ನಬಸವ ಸ್ವಾಮೀಜಿ 38ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಮಲ್ಲನಕೆರೆ ಮಠದಲ್ಲಿ ಶನಿವಾರ ಜರುಗಿತು.
ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀಮಠದವರೆಗೆ ಚನ್ನಬಸವ ಸ್ವಾಮೀಜಿ ಚಿತ್ರದ ಮೆರವಣಿಗೆ ಜರುಗಿತು. ಅಭಿನವ ಚನ್ನಬಸವ ಸ್ವಾಮೀಜಿ, ರಾಮಸ್ವಾಮಿ ರಾಕೇಶಯ್ಯ, ಕೋಡಿಹಳ್ಳಿ ಮುದುಕಪ್ಪ, ಕಣದಾಳ ಶಂಕ್ರಪ್ಪ ಪಾಲ್ಗೊಂಡಿದ್ದರು.
ಮಠದಲ್ಲಿ ಜರುಗಿದ ಸಂಸ್ಮರಣೋತ್ಸವದಲ್ಲಿ ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಸ್ವಾಮೀಜಿಗೆ ‘ಚನ್ನಬಸವ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೀಲಗುಂದದ ಚನ್ನಬಸವ ಸ್ವಾಮೀಜಿ, ಉತ್ತಂಗಿಯ ಸೋಮಶಂಕರ ಸ್ವಾಮೀಜಿ, ಹಿರೇಹಡಗಲಿಯ ಹಾಲಸ್ವಾಮೀಜಿ, ಸೋಗಿ ಎ.ಎಂ.ಹಾಲಯ್ಯ ಶಾಸ್ತ್ರಿ, ವೀರಶೈವ ಮಹಾಸಭಾ ಅಧ್ಯಕ್ಷ ಸಿ.ಕೆ.ಎಂ. ಬಸಲಿಂಗಸ್ವಾಮಿ, ನರಗ ಘಟಕದ ಅಧ್ಯಕ್ಷ ಎಂ.ಉಮೇಶ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಎಸ್.ಎಂ.ಅಶೋಕ ಶೆಟ್ಟಿ, ಎಸ್.ಮಹಾಂತೇಶ, ಎ.ಜೆ.ವೀರೇಶ ಇದ್ದರು. ಪತ್ರಕರ್ತ ಎಂ.ದಯಾನಂದ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.