
ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಮೈಲಾಪುರ ಗ್ರಾಮದ ಬಳಿ ಗುರುವಾರ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಬಲಕುಂದಿ ಗ್ರಾಮದ ನಿವಾಸಿ ಮೂಕಣ್ಣ ಅವರ ಮಕ್ಕಳಾದ ಮಹಾಂಕಾಳಿ (11) ಹಾಗೂ ಶಿವರಾಜ (9) ಮೃತರು.
‘ಮೂಕಣ್ಣ ದಂಪತಿ ಮಕ್ಕಳೊಂದಿಗೆ ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ ಕೃಷಿ ಹೊಂಡದತ್ತ ತೆರಳಿದ ಇಬ್ಬರು ಮಕ್ಕಳು ನೀರಿನಲ್ಲಿ ಬಿದ್ದು, ಕೂಗತೊಡಗಿದರು. ಅವರಿಬ್ಬರ ರಕ್ಷಣೆಗೆ ಮೂಕಣ್ಣ ಮತ್ತು ಅವರ ಪತ್ನಿ ಪಾರ್ವತಮ್ಮ ರಕ್ಷಿಸಲು ಹೊಂಡಕ್ಕೆ ದುಮುಕಿದರು. ಇವರ ಹಿಂದೆ ಮತ್ತೊಬ್ಬ ಮಗ 15 ವರ್ಷದ ಬೀರಲಿಂಗ ಹೊಂಡಕ್ಕೆ ಹಾರಿದ್ದಾನೆ. ಎಲ್ಲರೂ ಕೂಗುತ್ತಿರುವುದು ಕಂಡು ಸ್ಥಳೀಯರು, ದಂಪತಿ ಮತ್ತು ಮಗನನ್ನು ರಕ್ಷಿಸಿದರು. ಇನ್ನಿಬ್ಬರು ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ’ ಎಂದು ತೆಕ್ಕಲಕೋಟೆ ಠಾಣೆ ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಮೃತದೇಹಗಳನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.