ADVERTISEMENT

ಎರಡಂಕಿಗಿಳಿದ ಕೋವಿಡ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 12:55 IST
Last Updated 20 ಜೂನ್ 2021, 12:55 IST

ಹೊಸಪೇಟೆ (ವಿಜಯನಗರ): ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದಿದೆ.

ಕೊರೊನಾ ಎರಡನೇ ಅಲೆಯ ಆರಂಭದಲ್ಲಿ ಜಿಲ್ಲೆಯಲ್ಲಿ ನಿತ್ಯ ಸರಾಸರಿ 1,500ರಿಂದ 2,000 ಪ್ರಕರಣಗಳು ವರದಿಯಾಗಿದ್ದವು. ಬಳಿಕ ಆ ಸಂಖ್ಯೆ ಮೂರಂಕಿಗೆ ಇಳಿದಿತ್ತು. ಈಗ ಅದು ಎರಡಂಕಿ ತಲುಪಿದೆ.

ಭಾನುವಾರ ಅವಳಿ ಜಿಲ್ಲೆಯಲ್ಲಿ ಒಟ್ಟು 67 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಎರಡನೇ ಅಲೆಯಲ್ಲಿ ದಾಖಲಾದ ಅತಿ ಕಡಿಮೆ ಪ್ರಕರಣಗಳಿವು. ಬಳ್ಳಾರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು 18 ಪ್ರಕರಣಗಳು ವರದಿಯಾದರೆ, ಹೊಸಪೇಟೆ, ಸಂಡೂರು ಎರಡನೇ ಸ್ಥಾನದಲ್ಲಿವೆ. ಎರಡೂ ತಾಲ್ಲೂಕುಗಳಲ್ಲಿ ಕ್ರಮವಾಗಿ ತಲಾ 11 ಜನರಿಗೆ ಕೊರೊನಾ ದೃಢಪಟ್ಟಿದೆ.

ADVERTISEMENT

ಆದರೆ, ಜಿಲ್ಲೆಯಲ್ಲಿ ಈಗಲೂ ಕೋವಿಡ್‌ನಿಂದ ನಿಧನ ಹೊಂದುವವರ ಸಂಖ್ಯೆ ತಗ್ಗಿಲ್ಲ. ನಿತ್ಯ ಸರಾಸರಿ ಹತ್ತರಿಂದ 12 ಜನ ಮರಣ ಹೊಂದುತ್ತಿದ್ದಾರೆ. ಇದು ಸಹಜವಾಗಿಯೇ ಜನರನ್ನು ಆತಂಕಕ್ಕೀಡು ಮಾಡಿದೆ. ಬಳ್ಳಾರಿಯಲ್ಲಿ ಅತಿ ಹೆಚ್ಚು 748 ಸಕ್ರಿಯ ಪ್ರಕರಣಗಳಿದ್ದರೆ, ಹೊಸಪೇಟೆ ಎರಡನೇ ಸ್ಥಾನದಲ್ಲಿದ್ದು, 315 ಸಕ್ರಿಯ ಪ್ರಕರಣಗಳಿವೆ. ಕೂಡ್ಲಿಗಿಯಲ್ಲಿ ಅತಿ ಕಡಿಮೆ 102 ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.