ADVERTISEMENT

'ಬುಟ್ಟ ಬೊಮ್ಮ‌' ಹಾಡಿಗೆ ಸೋಂಕಿತ ವೈದ್ಯರ ಡ್ಯಾನ್ಸ್!

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 15:58 IST
Last Updated 20 ಜುಲೈ 2020, 15:58 IST
ವೈದ್ಯರ ನೃತ್ಯ
ವೈದ್ಯರ ನೃತ್ಯ   

ಬಳ್ಳಾರಿ: ಕೊರೊನಾ ಸೋಂಕಿತರಾಗಿ ನಗರದ ಸರ್ಕಾರಿ ದಂತ ವೈದ್ಯ ಕಾಲೇಜಿನಲ್ಲಿ‌ ಚಿಕಿತ್ಸೆ ಪಡೆಯುತ್ತಿರುವ ವೈದ್ಯರ ತಂಡದ 'ಅಲಾವೈಂಕುಂಠಪುರಂಲೋ‌' ಸಿನಿಮಾದ 'ಬುಟ್ಟ ಬೊಮ್ಮ' ಹಾಡಿಗೆ ಸಮೂಹ ನೃತ್ಯ ಮಾಡಿರುವ 58 ಸೆಕೆಂಡ್ಅವಧಿಯ ವೀಡಿಯೊ ವೈರಲ್ ಆಗಿದೆ.

ಈ ವೀಡಿಯೋಗಳನ್ನು ಮಾಧ್ಯಮಗಳಿಗೆ ಶೇರ್‌ಮಾಡಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, 'ಕೊರೊನಾ ಸೋಂಕಿತರಿಗಾಗಿ‌ ಕೆಲಸ ಮಾಡುತ್ತಾ ಸೋಂಕಿತರಾದ ಈ ಸೇನಾನಿಗಳ ನೃತ್ಯವು ಸಕಾರಾತ್ಮಕ ಚಿಂತನೆಯ ಉತ್ತಮ ಮಾದರಿ' ಎಂದು ಶ್ಲಾಘಿಸಿದ್ದಾರೆ.

ಸೋಂಕಿತ ವೈದ್ಯರು 'ಮಸ್ತ್ ಮಸ್ತ್ ಹುಡುಗಿ ಬಂದ್ಲು' ಹಾಡಿಗೆ ಮಾಡಿರುವ 38 ಸೆಕೆಂಡ್ ಅವಧಿಯ ನೃತ್ಯವನ್ನೂ ಜಿಲ್ಲಾಧಿಕಾರಿ ಶೇರ್ ಮಾಡಿದ್ದಾರೆ. ಎರಡೂ ನೃತ್ಯದಲ್ಲೂ ವೈದ್ಯರ ಸಂತಸ, ಸಂಭ್ರಮ ಗಮನ ಸೆಳೆಯುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.