ADVERTISEMENT

ಹೊಸಪೇಟೆ: ದಾಖಲೆ ಒದಗಿಸಲು ನಗರಸಭೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 8:52 IST
Last Updated 7 ಮಾರ್ಚ್ 2023, 8:52 IST
ಕೊಂಡನಾಯಕನಹಳ್ಳಿಯ ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ, ಶಿಕ್ಷಕರ ಬಡಾವಣೆ ನಾಗರಿಕರ ವೇದಿಕೆ, ಕಿರಣ್‌ ಕೃಷ್ಣ ಬಡಾವಣೆ ನಾಗರಿಕ ವೇದಿಕೆಯವರು ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ಕೊಂಡನಾಯಕನಹಳ್ಳಿಯ ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ, ಶಿಕ್ಷಕರ ಬಡಾವಣೆ ನಾಗರಿಕರ ವೇದಿಕೆ, ಕಿರಣ್‌ ಕೃಷ್ಣ ಬಡಾವಣೆ ನಾಗರಿಕ ವೇದಿಕೆಯವರು ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಫಾರಂ-3, ಮ್ಯುಟೇಶನ್, ಮನೆ ಕಟ್ಟಲು ಅನುಮತಿ ನೀಡಬೇಕೆಂದು ಕೊಂಡನಾಯಕನಹಳ್ಳಿಯ ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ, ಶಿಕ್ಷಕರ ಬಡಾವಣೆ ನಾಗರಿಕರ ವೇದಿಕೆ, ಕಿರಣ್‌ ಕೃಷ್ಣ ಬಡಾವಣೆ ನಾಗರಿಕ ವೇದಿಕೆಯವರು ಆಗ್ರಹಿಸಿದ್ದಾರೆ.

ಈ ಸಂಬಂಧ ಅವರು ಸೋಮವಾರ ನಗರದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಸದರಿ ಬಡಾವಣೆಗಳು 30ರಿಂದ 40ವರ್ಷಗಳ ಹಿಂದೆ ನಗರಾಭಿವೃದ್ದಿ ಪ್ರಾಧಿಕಾರದಿಂದ ವಸತಿ ವಿನ್ಯಾಸ ಯೋಜನೆ ಅಡಿ ಅಧಿಕೃತವಾಗಿ ನಿರ್ಮಾಣವಾಗಿವೆ. 202ರ ವರೆಗೆ ಬಡಾವಣೆಯ ನಿವಾಸಿಗಳಿಗೆ ನಗರಸಭೆಯಿಂದ ಫಾರಂ-3, ಮ್ಯುಟೇಶನ್, ಮನೆ ಕಟ್ಟಲು ಅನುಮತಿ ದಾಖಲೆಗಳನ್ನು ನೀಡಲಾಗುತ್ತಿತ್ತು. ಆದರೆ, ಕಳೆದ 2ವರ್ಷಗಳಿಂದ ನಗರಸಭೆಯವರು ಯಾವುದೇ ಸಕಾರಣ ನೀಡದೆ ಮೇಲ್ಕಾಣಿಸಿದ ದಾಖಲೆಗಳನ್ನು ನೀಡುತ್ತಿಲ್ಲ. ಇದರಿಂದ ಬಡಾವಣೆಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗೋಳು ತೋಡಿಕೊಂಡಿದ್ದಾರೆ.

ADVERTISEMENT

ಕೌಟುಂಬಿಕ ಸಮಸ್ಯೆಗಳ ನಿವಾರಣೆ, ಆರೋಗ್ಯ, ಶಿಕ್ಷಣ, ಮದುವೆ ಸೇರಿದಂತೆ ಇತರೆ ಕಾರ್ಯಗಳನ್ನು ಸಕಾಲದಲ್ಲಿ ಮಾಡಲು ಆಗುತ್ತಿಲ್ಲ. ಸೂಕ್ತ ದಾಖಲೆಗಳಿಲ್ಲದ ಕಾರಣ ಆಸ್ತಿ ಪರಭಾರೆ, ಬ್ಯಾಂಕಿನಿಂದ ಸಾಲ ಪಡೆಯಲು ಆಗುತ್ತಿಲ್ಲ. ಈ ವಿಷಯ ವರ್ಷದ ಹಿಂದೆ ಗಮನಕ್ಕೆ ತಂದರೂ ಬಗೆಹರಿದಿಲ್ಲ. ಸದರಿ ದಾಖಲೆಗಳನ್ನು ಪಡೆಯಲು ಅಗತ್ಯವಾಗಿರುವ ಅಭಿವೃದ್ದಿ ಶುಲ್ಕ ಪಾವತಿಸಲು ಬಡಾವಣೆಯ ನಿವಾಸಿಗಳು ಸಿದ್ಧರಿದ್ದಾರೆ. ಹಾಗಾಗಿ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದ್ದಾರೆ.

ಶಿವಜ್ಯೋತಿ ಬಡಾವಣೆ ಸಂಘದ ಅಧ್ಯಕ್ಷ ಯು.ಆಂಜನೇಯಲು, ಶಿಕ್ಷಕರ ಬಡಾವಣೆಯ ಸಂಘದ ಅಧ್ಯಕ್ಷ ಬಿ.ರಿಂದಪ್ಪ, ವೈ.ಯಮುನೇಶ್, ನೀಲಕಂಠಪ್ಪ, ವೆಂಕಟೇಶ್, ಎ.ವೀರೇಶಪ್ಪ, ಹಳ್ಳೂರು ಎಂ.ಓಂಕಾರೇಶ್ವರ, ವಿ.ನಾಗೇಶ್, ತಿಪ್ಪೇಸ್ವಾಮಿ, ಪಿ.ಗೂರ್ಯಾ ನಾಯ್ಕ, ಶಿವಶಂಕ್ರಪ್ಪ, ತುಕಾರಾಂ ಶಾಸ್ತ್ರಿ, ಮೇಷ್ಟ್ರು ಮನೋಹರ್, ರಾಜಸಾಬ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.